ನವದೆಹಲಿ : ಈ ತಿಂಗಳ ಕೊನೆಯ ವಾರದಲ್ಲಿ ಮತ್ತೊಂದು ಖಗೋಳ ವಿಸ್ಮಯ ಸಂಭವಿಸುತ್ತಿದೆ. ಈ ಬಾರಿ ಮಾರ್ಚ್ 28 ರಂದು ಐದು ಗ್ರಹಗಳು ಜತೆಗೆ ಚಂದ್ರ ಒಟ್ಟಿಗೆ ಕಾಣಿಸಿಕೊಳ್ಳಲಿದ್ದು, ಬಹುತೇಕ ಆರ್ಕ್ ರೂಪದಲ್ಲಿ (ವೃತ್ತದ ಒಂದು ಭಾಗ) ಗೋಚರಿಸುತ್ತವೆ. ಐದು ಗ್ರಹಗಳು ಅಕ್ಷರಶಃ ಸರಳ ರೇಖೆಯಲ್ಲಿ ಇರುವುದಿಲ್ಲವಾದರೂ, ಬಹುತೇಕ ಆರ್ಕ್ ರೂಪದಲ್ಲಿ ಗೋಚರಿಸುತ್ತವೆ. ಮಾರ್ಚ್ 1 ರಂದು, ಶುಕ್ರ ಮತ್ತು ಗುರು ಗ್ರಹಗಳು ಒಂದೇ ಸಾಲಿನಲ್ಲಿ ಕಾಣಿಸಿಕೊಂಡಿತ್ತು. ಹಾಗೆ, ಫೆಬ್ರವರಿಯ ಉದ್ದಕ್ಕೂ, ಗುರು ಮತ್ತು ಶುಕ್ರ ಚಂದ್ರನೊಂದಿಗೆ ಅಲೈನ್ ಆಗಿದ್ದವು ಮತ್ತು ಪರಸ್ಪರ ಹತ್ತಿರವಾಗುತ್ತಿದ್ದವು.
ಈಗ, ಅದೇ ರೀತಿ ಬುಧ (Mercury), ಶುಕ್ರ (Venus), ಮಂಗಳ (Mars), ಗುರು (Jupiter) ಮತ್ತು ಯುರೇನಸ್ (Uranus) ಮಾರ್ಚ್ 28 ರಂದು ಸೂರ್ಯಾಸ್ತದ (Sunset) ನಂತರ ಗೋಚರಿಸುತ್ತದೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ. ಗುರು ಗ್ರಹವು ಬುಧ ಗ್ರಹಕ್ಕಿಂತ ಪ್ರಕಾಶಮಾನವಾಗಿ ಕಾಣಿಸಲಿದ್ದು, ಒಟ್ಟಾರೆ ಇಡೀ ಗುಂಪಿನಲ್ಲಿ ಶುಕ್ರ ಗ್ರಹವು ಪ್ರಕಾಶಮಾನವಾದ ಗ್ರಹವಾಗಿದೆ. ಗುರು ಮತ್ತು ಬುಧದ ಮೇಲಿನ ಎಡಭಾಗದಲ್ಲಿ ಶುಕ್ರವು ಪ್ರಕಾಶಮಾನವಾಗಿರುತ್ತದೆ.
ಇನ್ನು, ಶುಕ್ರವು ಬರಿಗಣ್ಣಿನಿಂದ ಗೋಚರಿಸುತ್ತದೆ. ಏಕೆಂದರೆ ಅದು ಎಲ್ಲಾ ಇತರ ಗ್ರಹಗಳಿಗಿಂತ ಹೆಚ್ಚು ಬೆರಗುಗೊಳಿಸುತ್ತದೆ. ಆದರೆ, ದೃಶ್ಯ ಸಾಧನಗಳಿಲ್ಲದೆ ಯುರೇನಸ್ ಅನ್ನು ಕಂಡುಹಿಡಿಯುವುದು ಅತ್ಯಂತ ಕಷ್ಟಕರವಾಗಿರುತ್ತದೆ. ಯುರೇನಸ್ ಶುಕ್ರನ ಬಳಿ ಕಾಣಿಸಿಕೊಳ್ಳುತ್ತದೆಯಾದರೂ ಬಹಳ ದುರ್ಬಲವಾಗಿರುತ್ತದೆ. ಮತ್ತು, ಮಂಗಳವು ಆಕಾಶದಲ್ಲಿ ತುಂಬಾ ಎತ್ತರದಲ್ಲಿ ಕಾಣಿಸಿಕೊಳ್ಳುತ್ತದೆ ಮತ್ತು ಗಮನಾರ್ಹವಾದ ವರ್ಣವನ್ನು ಹೊಂದಿರುತ್ತದೆ.
ಮಾರ್ಚ್ 1 ರಂದು, ಶುಕ್ರ ಮತ್ತು ಗುರು ಗ್ರಹಗಳು ಒಟ್ಟಿಗೆ ಸೇರಿಕೊಂಡಿದ್ದವು. ಫೆಬ್ರವರಿಯಲ್ಲಿ, ಗುರು ಮತ್ತು ಶುಕ್ರ ಚಂದ್ರನೊಂದಿಗೆ ಅಲೈನ್ ಆಗಿತ್ತು ಮತ್ತು ಪರಸ್ಪರ ಹತ್ತಿರವಾಗುತ್ತಿದ್ದವು.
ಗ್ರಹದ ನಡುವಿನ ಸಂಯೋಗವು ಸೌರವ್ಯೂಹದಲ್ಲಿ ಆಗಾಗ್ಗೆ ಸಂಭವಿಸುತ್ತದೆ. ಏಕೆಂದರೆ, ಗ್ರಹಗಳು ಸೂರ್ಯನ ಸುತ್ತ ಸರಿಸುಮಾರು ಒಂದೇ ಸಮತಲದಲ್ಲಿ ಅಂದರೆ ಎಕ್ಲಿಪ್ಟಿಕ್ ಪ್ಲೇನ್‌ನಲ್ಲಿ ಸುತ್ತುತ್ತವೆ. ಮತ್ತು ಹೀಗೆ ನಮ್ಮ ಆಕಾಶದಾದ್ಯಂತ ಇದೇ ರೀತಿಯ ಮಾರ್ಗಗಳನ್ನು ಪತ್ತೆಹಚ್ಚುತ್ತವೆ ಎಂದು ನಾಸಾ ಹೇಳಿದೆ.