ಕಾರ್ಕಳ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಚಾಲನೆ ಕಾರ್ಯಕ್ರಮವು ಮಾಳ ಶ್ರೀ ರಾಮ ಭಕ್ತಿ ಧಾಮ ದ ಸಭಾ ಭವನದಲ್ಲಿ ಪಂಚಾಯತ್ ಅಧ್ಯಕ್ಷ ರಾದ ಉಮೇಶ್ ಪೂಜಾರಿ ಅಧ್ಯಕ್ಷತೆ ಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ವಿಮಲಾ ಎನ್ ಪೂಜಾರಿ, ಆರೋಗ್ಯ ಅಧೀಕ್ಷಕರಾದ ವಸಂತ್ ಶೆಟ್ಟಿ, ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಜಯಂತಿ ಮೆಹಂದಲೆ, ಗ್ರಾ. ಪಂ ಸದಸ್ಯರಾದ ರಕ್ಷಿತಾ ಶೆಟ್ಟಿ, ಸುಂದರಿ ಗೌಡ, ಶಶಿಕಲಾ, ಮಲ್ಲಿಕಾ ಶೆಟ್ಟಿ, ನಿಲೇಶ್ ತೆಂಡೂಲ್ಕರ್, ಅಶೋಕ್ ಶೆಟ್ಟಿ, ಸುಧೀರ್ ಶೆಟ್ಟಿ,ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಕಾರ್ಯದರ್ಶಿ ಸುಬ್ಬಯ್ಯ , ಪಂಚಾಯತ್ ಸಿಬ್ಬಂದಿ ಯವರು, ಸಂಜೀವಿನಿ ಒಕ್ಕೂಟ ದ ಸದಸ್ಯರು ಹಾಗೂ 361ಜನ ಗೃಹಲಕ್ಷ್ಮಿ ಫಲಾನುಭವಿ ಗಳು ಭಾಗವಹಿಸಿದ್ದರು.
ಪ್ರೊಜೆಕ್ಟರ್ ನಲ್ಲಿ ಮೈಸೂರು ನಿಂದ ಈ ಕಾರ್ಯಕ್ರಮದ ನೇರ ಪ್ರಸಾರವನ್ನು ವೀಕ್ಷಣೆ ಮಾಡಲಾಯಿತು.ಗುರುಕುಲ ಶಾಲಾ ಮಕ್ಕಳು ನಾಡಗೀತೆಯನ್ನು ಹಾಡುವುದರೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು.
ಸುಧೀರ್ ಶೆಟ್ಟಿ ಸ್ವಾಗತಿಸಿ , ವಂದನಾರ್ಪಣೆ ಗೈದರು.