ಕಾರ್ಕಳ : ಕಾರ್ಕಳ ತಾಲೂಕು ಮಾಳ ಗ್ರಾಮದ ದರ್ಕಾಸು ಮನೆ ಎಂಬಲ್ಲಿ ಮದ್ಯವ್ಯಸನಿ ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದರ್ಕಾಸು ನಿವಾಸಿ ಉಮೇಶ್ ಪೂಜಾರಿ (40ವ) ಆತ್ಮಹತ್ಯೆ ಮಾಡಿಕೊಂಡವರು. ಆವರಿಗೆ ವಿವಾಹವಾಗಿ 12 ವರ್ಷಗಳಾಗಿದ್ದು ಈವರೆಗೂ ಮಕ್ಕಳಾಗಿರಲಿಲ್ಲ. ಇದೇ ಕಾರಣಕ್ಕೆ ವಿಪರೀತ ಮದ್ಯಪಾನ ಸೇವಿಸುತ್ತಿದ್ದ ಅವರು ಮಾ.9ರಂದು ಮನೆಯ ತೋಟದಲ್ಲಿ ವಿಷ ಸೇವಿಸಿ ಅಸ್ವಸ್ಥರಾಗಿದ್ದರು. ಕೂಡಲೇ ಅವರನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು ರಾತ್ರಿ 11.30ರ ವೇಳೆಗೆ ಮೃತಪಟ್ಟಿದ್ದರು.
ಈ ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.