ಬೆಳ್ಮಣ್: ಮುಂಡ್ಕೂರು ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷರಾಗಿ ಯಶೋದ ಶೆಟ್ಟಿ ಸಂಕಲಕರಿಯ ಅವರು ಆಯ್ಕೆಯಾಗಿದ್ದಾರೆ. ಮುಂಡ್ಕೂರು ಸಮುದಾಯ ಭವನದಲ್ಲಿ ಬಿಲ್ಲವ ಯುವ ವೇದಿಕೆಯ ಅಧ್ಯಕ್ಷ ಹರೀಶ್ ಪೂಜಾರಿ ಸಚ್ಚರಿಪೇಟೆ ಇವರ ಅಧ್ಯಕ್ಷತೆಯಲ್ಲಿ ನಡೆದ ಬಿಲ್ಲವ ಯುವ ವೇದಿಕೆ ಹಾಗೂ ಬಿಲ್ಲವ ಮಹಿಳಾ ವೇದಿಕೆ ಮುಂಡ್ಕೂರು ಮುಲ್ಲಡ್ಕ ಇನ್ನಾ ಇದರ ಮಾಸಿಕ ಸಭೆಯಲ್ಲಿ 2023-2025ನೇ ಸಾಲಿನ ಮಹಿಳಾ ವೇದಿಕೆಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಕಾರ್ಯದರ್ಶಿಯಾಗಿ ಶ್ರೀಮತಿ ಲೀಲಾ ಪಡುದಡ್ಡು, ಕೋಶಾಧಿಕಾರಿಯಾಗಿ ರಂಜನಿ ಕಲ್ಲಿಮಾರು, ಗೌರವಾಧ್ಯಕ್ಷರಾಗಿ ಮಲ್ಲಿಕಾ, ಗೌರವ ಸಲಹೆಗಾರರಾಗಿ ಶಶಿಕಲಾ ಬಾಲಕೃಷ್ಣ, ಶಶಿಕಲಾ ಕೆ ಸಾಲ್ಯಾನ್, ಹೇಮಾ ಕಲ್ಲಿಮಾರ್, ಉಪಾಧ್ಯಕ್ಷರಾಗಿ ಸುಮತಿ ಪೂಜಾರ್ತಿ, ಸುಮತಿ ಎಚ್, ಜೊತೆ ಕಾರ್ಯದರ್ಶಿಯಾಗಿ ರೇಖಾ, ಕ್ರೀಡಾ ಕಾರ್ಯದರ್ಶಿಯಾಗಿ ರಾಧಿಕಾ ಕಲ್ಲಿಮಾರ್, ಸಂಘಟನಾ ಕಾರ್ಯದರ್ಶಿಯಾಗಿ ಸುನೀತಾ ಪಾದೆಬೆಟ್ಟು ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಸಮಿತಿ ಪದಾಧಿಕಾರಿಗಳಾಗಿ ರೇಖಾ ಉಗ್ಗೆದಬೆಟ್ಟು ತಿಲಕ ಕಲ್ಲಿಮಾರ್, ಜಯಂತಿ ಕಲ್ಲಿಮಾರ್, ಶೋಭಾ ಕಲ್ಲಿಮಾರ್, ವಿಮಲ ಕಲ್ಲಿಮಾರ್, ವಿದ್ಯಾ ಬಂಡ್ರೊಟ್ಟು, ಪ್ರೇಮ ಜಾರಿಗೆಕಟ್ಟೆ, ರತಿ ಕಲ್ಲಿಮಾರ್, ಉಷಾ ಬಂಡ್ರೊಟ್ಟು, ಚಾಂದಿನಿ ಕಲ್ಲಿಮಾರ್, ಕುಮುದಾ ಗೋಕುಲನಗರ, ಉಷಾ ತೋಟಮನೆ, ರೇಣುಕಾ ಇನ್ನಾ, ಸುಮಿತ್ರಾ ಇಂದಿರಾನಗರ, ರೇಖಾ ಪ್ರಕಾಶ್ ಪುಣ್ಕೆದಡಿ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಬಿಲ್ಲವ ಯುವ ವೇದಿಕೆಯ ಸಂಚಾಲಕ ಉದಯ್ ಕುಮಾರ್, ಗೌರವಾಧ್ಯಕ್ಷ ಸುರೇಶ್ ಪೂಜಾರಿ, ಗೌರವ ಸಲಹೆಗಾರ ಗುರುನಾಥ ಪೂಜಾರಿ, ಸಂಘಟನಾ ಕಾರ್ಯದರ್ಶಿ ನಿಶಾನ್ ತೋಟಮನೆ ಉಪಸ್ಥಿತರಿದ್ದರು.

