ಕಾರ್ಕಳ : ಕಾರ್ಕಳ ತಾಲೂಕಿನ ಜಾರ್ಕಳ ಮುಂಡ್ಲಿ ಜಿ.ವಿ.ಪಿ ಇಂಪ್ರಾ ಪ್ರಾಜೆಕ್ಟ್ ಕಂಪೆನಿಯ ಮ್ಯಾನೇಜರ್ ಸುದೀಪ್ ಹೆಗ್ಡೆ ಎಂಬವರ ಮೇಲೆ ತಂಡವೊAಡು ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಸುದೀಪ್ ಹೆಗ್ಡೆ ಅಜೆಕಾರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಎ.27 ರಂದು ರಾತ್ರಿ 10.15ರ ವೇಳೆಗೆ ಸುಜಿತ್ ಕುಮಾರ್ ಶೆಟ್ಟಿ, ಕಿಶೋರ್,ಸುಭಾಷ್‌ಚಂದ್ರ ಹೆಗ್ಡೆ, ವಿವೇಕಾನಂದ ಶೆಣೈ, ಅಭಿಲಾಷ್, ಲಕ್ಷ್ಮೀನಾರಾಯಣ ಮಲ್ಯ ಜೊತೆಗೆ ಇನ್ನೂ ಕೆಲವರು ಕಂಪೆನಿ ಒಳಗೆ ಏಕಾಏಕಿ ಅಕ್ರಮವಾಗಿ ಪ್ರವೇಶಿಸಿ ಕಂಪೆನಿಯ ಸೊತ್ತುಗಳನ್ನು ನಾಶಗೊಳಿಸಿ, ಮ್ಯಾನೇಜರ್ ಸುದೀಪ್ ಹೆಗ್ಡೆ ಹಾಗೂ ಸಿಬ್ಬಂದಿಗಳಿಗೆ ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆಯೊಡ್ಡಿದ್ದಾರೆ. ಅಲ್ಲದೆ ಸುದೀಪ್ ಹೆಗ್ಡೆಯವರಿಗೆ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ದೂರು ನೀಡಿದ್ದು ಪ್ರಕರಣ ದಾಖಲಾಗಿರುತ್ತದೆ.