ಬೆಂಗಳೂರು: ಐಸಿಸ್ ಭಯೋತ್ಪಾದನೆ ದುಷ್ಕೃತ್ಯದ ಪ್ರಕರಣದಲ್ಲಿ ಎನ್ಐಎ ತಂಡವು (ರಾಷ್ಟ್ರೀಯ ತನಿಖಾ ದಳ) ಕರ್ನಾಟಕ ಮತ್ತು ಮಹಾರಾಷ್ಟ್ರದ 40 ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಓರ್ವ ಶಂಕಿತ ಐಸಿಸ್ ಉಗ್ರ ಮುಂಬಯಿ ಮೂಲದ ಆಲಿ ಅಬ್ಬಾಸ್ ಎಂಬಾತನನ್ನು ಬಂಧಿಸಲಾಗಿದೆ.
ಶನಿವಾರ ಮುಂಜಾನೆಯಿಂದ ಎನ್‌ಐಎ ಒಟ್ಟು 44 ಸ್ಥಳಗಳಲ್ಲಿ ದಾಳಿ ನಡೆಸಿದೆ. ಈ ಪೈಕಿ, ಕರ್ನಾಟಕದ ಬೆಂಗಳೂರು, ಪುಣೆಯಲ್ಲಿ 2, ಥಾಣೆ ಗ್ರಾಮಾಂತರದಲ್ಲಿ 31, ಥಾಣೆ ನಗರದಲ್ಲಿ 9 ಮತ್ತು ಭಾಯಂದರ್‌ನಲ್ಲಿ 1 ಕಡೆ ಶೋಧ ನಡೆಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಬಂಧಿತನಾದ ಶಂಕಿತ ಉಗ್ರ ಬೆಂಗಳೂರಿನಲ್ಲಿ ಉರ್ದು ಶಾಲೆ ನಡೆಸುತ್ತಿದ್ದ.ಬೆಂಗಳೂರಿನ ಟ್ಯಾನರಿ ರಸ್ತೆಯ ಅಪಾರ್ಟ್‌ಮೆಂಟ್ ನಲ್ಲಿ ವಾಸವಾಗಿದ್ದ ಶಂಕಿತ ಉಗ್ರನ ನಿವಾಸದ ಮೇಲೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ.
ಮುಂಬೈ ಮೂಲದವನಾಗಿರುವ ಅಲಿ ಅಬ್ಬಾಸ್. ನಗರದಲ್ಲಿ ಉರ್ದು ಶಾಲೆ ನಡೆಸುವ ಮೂಲಕ ಮಕ್ಕಳಲ್ಲಿ ಐಸಿಸ್ ಉಗ್ರರ ಚಿಂತನೆ ಬಿತ್ತುತ್ತಿದ್ದ ಅಬ್ಬಾಸ್. ಆಸ್ಪತ್ರೆ ಕೆಲಸ ನೋಡಿಕೊಳ್ಳುತ್ತಿದ್ದ ಅಲಿ ಅಬ್ಬಾಸ್ ಪತ್ನಿ ಡಾ.ಸುಮಯ್ಯಾ ಪೇಟಿವಾಲ. ಎನ್‌ಐಎ ಅಧಿಕಾರಿಗಳು ದಾಳಿ ಲಕ್ಷಾಂತರ ರೂಪಾಯಿ ನಗದ ಹಣ ಪತ್ತೆಯಾಗಿದೆ.ಈ ದಾಳಿಯಲ್ಲಿ ಮೊಬೈಲ್, ಲ್ಯಾಪ್‌ಟಾಪ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿರುವ ಎನ್‌ಐಎ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ನಾಲ್ಕು ವರ್ಷದ ಹಿಂದೆ ಬೆಂಗಳೂರಿಗೆ ಬಂದ ಶಂಕಿತ ಉಗ್ರ!
ಐಸಿಸ್‌ನೊಂದಿಗೆ ನಿರಂತರ ಸಂಪರ್ಕ ಹೊಂದಿರುವ ಮುಂಬೈ ಮೂಲದ ಅಲಿ ಅಬ್ಬಾಸ್ ಕಳೆದ ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದಾನೆ. ಬೆಂಗಳೂರಿಗೆ ಬರುವ ಮೊದಲು ಪುಣೆಯಲ್ಲಿ ನೆಲೆಸಿದ್ದ ಶಂಕಿತ ಉಗ್ರ ಅನಂತರ ಪುಣೆಯಿಂದ ಬೆಂಗಳೂರಿಗೆ ಬಂದು ನೆಲೆಸಿದ್ದಾನೆ. ಬೆಂಗಳೂರಿನಲ್ಲಿದ್ದುಕೊಂಡೇ ದೇಶದ ನಾನಾ ಭಾಗಗಳಿಗೆ ಅತ್ಯಂತ ರಹಸ್ಯವಾಗಿ ಸಂಚರಿಸುತ್ತಿದ್ದ ಅಲಿ ಅಬ್ಬಾಸ್ ಗೆ ಆತನ ಪತ್ನಿಯೂ ಈ ಕೃತ್ಯಕ್ಕೆ ಸಹಕರಿಸುತ್ತಿದ್ದಳು ಎನ್ನುವುದಾಗಿ ಶಂಕಿಸಲಾಗಿದೆ. ಅಲಿ ಅಬ್ಬಾಸ್ ಹಾಗೂ ಅಲಿ ಪತ್ನಿ ಮೂವರು ಮಕ್ಕಳು ಹೊಂದಿದ್ದು, ಒಂದು ವರ್ಷದ ಹಿಂದೆ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಕೋವಿಡ್ ಸಂದರ್ಭದಲ್ಲಿ ಅಲಿ ಅಬ್ಬಾಸ್ ಕೆಲಸ ಬಿಟ್ಟು ಮನೆಯಲ್ಲಿದ್ದ.ಈತನ ಪತ್ನಿ ನ್ಯೂಟ್ರಿಕೇರ್ ಆಸ್ಪತ್ರೆ ನಡೆಸುತ್ತಿದ್ದಾಳೆ. ಇತ್ತ ಕೆಲಸ ಬಿಟ್ಟ ಆಲಿ ಅಬ್ಬಾಸ್ ಸ್ಥಳೀಯವಾಗಿ ವಾಟ್ಸಪ್ ಗ್ರೂಪ್ ಮಾಡಿಕೊಂಡು ಇತರರನ್ನು ಸೇರಿಸಿ,ಈ ಗ್ರೂಪ್‌ನಲ್ಲಿ ತನ್ನ ವಿಚಾರ ಒಪ್ಪುವ, ತನ್ನ ಪರವಾಗಿ ಮಾತನಾಡುವವರನ್ನು ಆಯ್ದು ಬೇರೊಂದು ಗ್ರೂಪ್ ಗೆ ಸೇರಿಸುತ್ತಿದ್ದ. ಹೀಗೆ ಸ್ಥಳೀಯವಾಗಿ ವಾಟ್ಸಪ್ ಟೆಲಿಗ್ರಾಂ ಹಲವು ಗ್ರೂಪ್ ಗಳನ್ನು ಮಾಡಿರುವ ಶಂಕಿತ ಉಗ್ರ ತನ್ನ ವಿಚಾರ ಒಪ್ಪುವವರಿಗೆಲ್ಲ ಬೇರೊಂದು ಗ್ರೂಪ್ ಮಾಡಿ ಅದರಲ್ಲಿ ಪ್ರಚೋದನೆ ನೀಡುವ ಹೇಳಿಕೆ ಕಳುಹಿಸುತ್ತಿದ್ದ. ಸ್ಥಳೀಯವಾಗಿ ತೀರಾ ಹತ್ತಿರದವರಿಗೆ ವಾಟ್ಸಪ್ ಬಳಕೆ ಮಾಡದಂತೆ ಹೇಳುತ್ತಿದ್ದ ಅಲಿ, ಟೆಲಿಗ್ರಾಂ ಬಳಕೆ ವಾಟ್ಸಪ್‌ಗಿಂತ ಸುರಕ್ಷಿತ ಎಂದು ಸೂಚನೆ ನೀಡುತ್ತಿದ್ದ.
ಎನ್ಐಎ ಅಧಿಕಾರಿಗಳು ಅಲಿ ಮನೆಯಲ್ಲಿ ತೀವ್ರ ಶೋಧ ನಡೆಸುತ್ತಿದ್ದು ಈ ಪ್ರಕರಣದಲ್ಲಿ ಇನ್ನಷ್ಟು ಮಾಹಿತಿಗಳು ಹೊರಬರುವ ಸಾಧ್ಯತೆಗಳಿವೆ