Share this news

ಮುಂಬಯಿ: ಖಾಸಗಿ ಬ್ಯಾಂಕಿAಗ್ ಕ್ಷೇತ್ರದಲ್ಲಿ ದೇಶದಲ್ಲಿ ಹೆಸರುವಾಸಿಯಾಗಿರುವ ಪ್ರತಿಷ್ಟಿತ ದಿ.ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಸೂರ್ಯಕಾಂತ್ ಜೆ.ಸುವರ್ಣ ನೇತೃತ್ವದ ಬಣ ಭರ್ಜರಿ ಗೆಲುವು ಸಾಧಿಸಿದೆ.

ಬಿಲ್ಲವರ ಅಸೋಸಿಯೇಶನ್ ಅಧ್ಯಕ್ಷ ಹರೀಶ್ ಜಿ.ಪೂಜಾರಿ ಹಾಗೂ ಭಾರತ್ ಬ್ಯಾಂಕಿನ ಮಾಜಿ ಕಾರ್ಯಧ್ಯಕ್ಷ ಜಯ ಸಿ.ಸುವಣ9 ಅವರ ಪುತ್ರ ಸೂರ್ಯಕಾಂತ ಜೆ, ಸುವರ್ಣ ಬಣಗಳ ನಡುವಿನ ಜಿದ್ದಾಜಿದ್ದಿಯ ಸ್ಪರ್ಧೆಯಲ್ಲಿ ಅಂತಿಮವಾಗಿ ಒಟ್ಟು 19 ಸ್ಥಾನಗಳನ್ನು ಸೂರ್ಯಕಾಂತ್ ಜೆ ಸುವರ್ಣ ಅವರ ಬಣ ಗೆದ್ದು ಬೀಗಿದೆ

ಚುನಾವಣೆಯ ಬಳಿಕ ಮತಪಟ್ಟಿಗೆಗಳನ್ನು ಚುನಾವಣಾಧಿಕಾರಿಗಳು ಭದ್ರತೆಯೊಂದಿಗೆ ಗೋರೆಗಾಂವ್ ನ ಬ್ರಿಜ್‌ವಾಸಿ ಪ್ಯಾಲೇಸ್ ಸಭಾಗೃಹಕ್ಕೆ ಕೊಂಡೊದ್ದು,ಕೋಆಪರೇಟಿವ್ ಸೊಸೈಟಿಗಳ ಹೆಚ್ಚುವರಿ ರಿಜಿಸ್ಟಾçರ್ ಚುನಾವಣಾಧಿಕಾರಿ ವಿ.ಕೆ ಚವ್ಹಾಣ್ ಅವರು ಅಭ್ಯರ್ಥಿಗಳ ಸಮ್ಮುಖದಲ್ಲಿ ಮತಪೆಟ್ಟಿಗೆಗಳನ್ನು ತೆರೆದು ಮತ ಎಣಿಕೆ ಪ್ರಕ್ರಿಯೆ ನಡೆಸಿದರು. ಭಾರತ್ ಬ್ಯಾಂಕ್‌ನ ಸಿಇಓ ಹಾಗೂ ಆಡಳಿತ ನಿರ್ದೇಶಕ ವಿದ್ಯಾನಂದ ಎಸ್.ಕರ್ಕೇರಾ, ಮತ್ತು ಜಂಟಿ ಆಡಳಿತ ನಿರ್ದೇಶಕ ದಿನೇಶ್ ಜಿ.ಸಾಲ್ಯಾನ್ ಇವರ ಸಮ್ಮುಖದಲ್ಲಿ ಚುನಾವಣಾಧಿಕಾರಿ ವಿ.ಕೆ ಚವ್ಹಾಣ್ ಫಲಿತಾಂಶ ಘೋಷಿಸಿ ವಿಜೇತ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದರು.

ಬಿಲ್ಲವರ ಅಸೋಸಿಯೇಶನ್‌ನ ಅಧ್ಯಕ್ಷ ಹರೀಶ್ ಜಿ ಪುಜಾರಿ ನೇತೃತ್ವ ದಲ್ಲಿ ಬಿಲ್ಲವರ ಅಸೋಸಿಯೇಶನ ಮುಂಬಯಿ ಪ್ಯಾನೆಲ್ ನಿಂದ ಸಾಮಾನ್ಯ ವರ್ಗದಲ್ಲಿ ಹಾಲಿ ನಿರ್ದೆಶಕರಾಗಿದ್ದು ಸ್ಪರ್ಧಿಸಿದ್ದ ಲಿಂಗಪ್ಪ ಅಮೀನ್ (5987), ಪುರುಷೋತ್ತಮ ಕೋಟ್ಯಾನ್ (5543), ನಾರಾಯಣ ಪೂಜಾರಿ (5805),ಕೊರಗಪ್ಪ ಪೂಜಾರಿ (5250), ರಾಜಾ ಸಾಲಿಯಾನ್ (5455), ಮಹಿಳಾ ಸ್ಥಾನದಿಂದ ಶಾರದಾ ಕರ್ಕೇರಾ (5682),ಸುರೇಶ್ ಅಂಚನ್ (5757), ರೋಹಿತ್ ಸುವರ್ಣ (5426)ನವೀನ್ ಚಂದ್ರ ಅಮೀನ್ (5877),ಕೇಶವ ಕೋಟ್ಯಾನ್(5723),ರವಿ ಕೋಟ್ಯಾನ್ (5684),ಹರಿಶ್ಚಂದ್ರ ಕುಂದರ್ (5697),ಜಯ ಪೂಜಾರಿ (5731), ರಿತೇಶ್ ಕುಮಾರ್ ಪೂಜಾರಿ (5436), ಅನಿಲ್ ಸಾಲಿಯಾನ್ (5480), ರತ್ನಾಕರ್ ಸಾಲಿಯಾನ್ (5474), ರವೀಂದ್ರ ಸುವರ್ಣ (5468), ವಿಜಯಕುಮಾರ್ (5102),ನೀತಾ ಅಂಚನ್ (5932) ಮತಗಳನ್ನು ಪಡೆದು ಪರಾಭವಗೊಂಡರೆ, ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಡಾ.ಸತೀಶ್ ಬಂಗೇರ (1175) ಮತ್ತು ಸತೀಶ್ ಜಗನ್ನಾಥ್ ಬಂಗೇರ (1316) ಮತಗಳನ್ನು ಪಡೆದು ಪರಾಭವಗೊಂಡರು.

ಸೂರ್ಯಕಾAತ ಜೆ, ಸುವರ್ಣ ಸಾರಥ್ಯದ ಜಯ ಸಿ.ಸುವರ್ಣ ಪ್ಯಾನೆಲ್‌ನಿಂದ ಸಾಮಾನ್ಯ ವರ್ಗದಲ್ಲಿ ಸೋಮನಾಥ ಅಮೀನ್ (8382). ಜಯ ಕೋಟ್ಯಾನ್(8124), ಗಂಗಾಧರ ಪೂಜಾರಿ (7954),ಭಾಸ್ಕರ ಸಾಲಿಯಾನ್ (7947), ಸೂರ್ಯಕಾಂತ ಸುವರ್ಣ (8013),ಆಶೋಕ್ ಕೋಟ್ಯಾನ್ (4105), ಚಂದ್ರಶೇಖರ ಪೂಜಾರಿ (7878), ಮೋಹನದಾಸ ಪೂಜಾರಿ (7723), ನರೇಶ್ ಪೂಜಾರಿ (7848), ನಿರಂಜನ್ ಪೂಜಾರಿ(7853), ಸಂತೋಷ್ ಪೂಜಾರಿ (7793), ದಯಾನಂದ ಪೂಜಾರಿ (7728), sಗಣೇಶ್ ಪೂಜಾರಿ (7813),ಹರೀಶ್ ಪೂಜಾರಿ (7767), ನಾರಾಯಣ ಸುವರ್ಣ (7734) ಸುರೇಶ್ ಸುವರ್ಣ (7445), ನಾರಾಯಣ ಸುವರ್ಣ ಕಾರ್ನಾಡ್ (7720), ಮಹಿಳಾ ಮೀಸಲಾತಿಯಿಂದ ಸ್ಥಾನದಿಂದ ಆಶಾ ರಾಜೇಶ್ ಸಾಲಿಯಾನ್ (8691), ಜಯಲಕ್ಷಿ ಪ್ರೇಮಾನಂದ (8496) ಮತಗಳೊಂದಿಗೆ ವಿಜೇತರಾದರು. ಪರಿಶಿಷ್ಟವರ್ಗದ ಸ್ಥಾನಕ್ಕೆ ಹಾಲಿ ನಿರ್ದೇಶಕ ಆನ್ಬಲಗನ್ ಸಿ ಹರಿಜನ ಅವರೊಬ್ಬರೇ ನಾಮಪತ್ರ ಸಲ್ಲಿಸಿರುವ ಹಿನ್ನಲೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು. ಚುನಾವಣೆಯಲ್ಲಿ ವಿಜೇತರಾದ ಸೂರ್ಯಕಾಂತ ಸುವರ್ಣ ಅವರ ತಂಡಕ್ಕೆ ಕರ್ನಾಟಕ ಸರ್ಕಾರದ ಮಾಜಿ ಸಚಿವ ಡಾ.ಕೆ.ಸಿ ನಾರಾಯಣ ಗೌಡ ಅಭಿನಂದಿಸಿದರು.
ಹೆಚ್ಚುವರಿ ಚುನಾವಣಾಧಿಕಾರಿ ಸಂದೀಪ್ ದೇಶಮುಖ್, ಸಹಾಯಕ ಚುನಾವಣಾಧಿಕಾರಿ ದೇವದಾಸ್ ಗೋಸ್ವಾಮಿ ಮತ್ತು ಸಹಾಯಕ ಚುನಾವಣಾಧಿಕಾರಿ ರೋಹಿತ್ ಕೃಷ್ಣ ಉದ್ಯಾವರ ಅವರು ಮತಎಣಿಕಾ ಪ್ರಕ್ರಿಯೆಯಲ್ಲಿ ಸಹಕರಿಸಿದರು.

 

 

 

 

 

 

 

 

 

Leave a Reply

Your email address will not be published. Required fields are marked *