ಕಾರ್ಕಳ: ಮುಡಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕ ಹಿಂದೂ ರುದ್ರಭೂಮಿ ಮಂಜೂರುಗೊಳಿಸುವAತೆ ಬಜಗೋಳಿ ವಲಯದ ಜೆಡಿಎಸ್ ಘಟಕವು ಕಾರ್ಕಳ ತಹಸೀಲ್ದಾರ್ ಅನಂತಶAಕರ ಅವರಿಗೆ ಬುಧವಾರ ಮನವಿ ಸಲ್ಲಿಸಿದೆ.
ಮುಡಾರು ಪಂಚಾಯಿತಿ ವ್ಯಾಪ್ತಿಯಲ್ಲಿ ಸುಸಜ್ಜಿತ ಹಿಂದೂ ರುದ್ರಭೂಮಿ ನಿರ್ಮಾಣಕ್ಕೆ ಸಾಕಷ್ಟು ಬಾರಿ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ,ರುದ್ರಭೂಮಿ ವ್ಯವಸ್ಥೆಯಿಲ್ಲದೇ ಬಡವರು ಶವ ಸಂಸ್ಕಾರ ದೂರದ ರುದ್ರಭೂಮಿಗೆ ಅಲೆದಾಟ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮಕ್ಕೊಂದು ಹಿಂದೂ ರುದ್ರಭೂಮಿಗೆ ಜಾಗ ಮಂಜೂರಾತಿಗೆ ಕಾನೂನಿನಲ್ಲಿ ಅವಕಾಶವಿದ್ದರೂ ಪಂಚಾಯಿತಿ ಈ ಕುರಿತು ಯಾವುದೇ ಕ್ರಮಕೈಗೊಂಡಿಲ್ಲ, ಆದ್ದರಿಂದ ತಹಸೀಲ್ದಾರ್ ಅವರು ಕೂಡಲೇ ಪಂಚಾಯಿತಿ ಅಧಿಕಾರಿಕಗಳಿಗೆ ಜಮೀನು ಮಂಜೂರಾತಿಗೆ ನಿರ್ದೇಶನ ನೀಡಬೇಕೆಂದು ಜೆಡಿಎಸ್ ಘಟಕ ಮನವಿ ಮಾಡಿದೆ.