Share this news

ಕಾರ್ಕಳ : ಕಾರ್ಕಳ ತಾಲೂಕು ಬಜಗೋಳಿ ಮುಡಾರು ಗ್ರಾಮದ ಗರಡಿಗುಡ್ಡೆ ಎಂಬಲ್ಲಿ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಗರಡಿಗುಡ್ಡೆಯ ಪ್ರದೀಪ್ (32ವ) ಆತ್ಮಹತ್ಯೆ ಮಾಡಿಕೊಂಡ ಯುವಕ. ಪ್ರದೀಪ್ ಎಲೆಕ್ಟಿçಷಿಯನ್ ವೃತ್ತಿ ಮಾಡಿಕೊಂಡಿದ್ದು, ಮದ್ಯಪಾನದ ಚಟ ಹೊಂದಿದ್ದ. ಪ್ರದೀಪ್ ತಾಯಿ ಕಳೆದ 6 ವರ್ಷಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದು, ತಮ್ಮ ಪ್ರಶಾಂತ್ ಕಳೆದ ಕಳೆದ 8 ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದ.
ಇದರಿAದ ಮನನೊಂದಿದ್ದ ಪ್ರದೀಪ್ ಮಾ.8 ರಂದು ರಾತ್ರಿ ತನ್ನ ಮನೆಯ ಅಡುಗೆ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *