ಹೆಬ್ರಿ :ಹೆಬ್ರಿ ತಾಲೂಕಿನ ಮುದ್ರಾಡಿಯ ಭಕ್ರೆ ಎಂಬಲ್ಲಿ ಮಹಿಳೆಯೊಬ್ಬರು ನದಿ ದಾಟುತ್ತಿದ್ದ ವೇಳೆ ಕಾಲು ಜಾರಿ ನೀರಿನಲ್ಲಿ ಬಿದ್ದು ಮೇಲೆ ಬರಲಾಗದೆ ಮೃತಪಟ್ಟಿದ್ದಾರೆ.
ಮುದ್ರಾಡಿ ಗ್ರಾಮದ ಉಪ್ಪಳ ಶಾಲೆಗುಡ್ಡೆ ನಿವಾಸಿ ಭಾರತಿ ಪೂಜಾರಿ (49ವ) ಮೃತಪಟ್ಟವರು.
ಭಾರತಿ ಅವರು ಜೂ.28ರಂದು ಮಧ್ಯಾಹ್ನ ಬೀಡಿ ಕೊಡಲು ಹೋದವರು ಮುದ್ರಾಡಿಯ ಭಕ್ರೆ ನದಿಯನ್ನು ದಾಟುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲುಜಾರಿ ನೀರಿಗೆ ಬಿದ್ದು ಮೇಲೆ ಬರಲಾಗದೆ ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರರಕರಣ ದಾಖಲಾಗಿದೆ.