ಹೆಬ್ರಿ : ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಹಿಂದಿನಿAದ ವೇಗವಾಗಿ ಬಂದ ಬೈಕ್ ಡಿಕ್ಕಿಯಾಗಿ ಪಾದಾಚಾರಿ ವ್ಯಕ್ತಿಗೆ ಗಂಭೀರ ಗಾಯಗಳಾಗಿವೆ.
ಮುದ್ರಾಡಿ ಗ್ರಾಮದ ಅಣ್ಣಯ್ಯ ನಾಯ್ಕ (54) ಗಾಯಗೊಂಡವರು. ಅವರು ಶನಿವಾರ ಬೆಳಗ್ಗೆ ಉಪ್ಪಳ ಕಡೆಯಿಂದ ಮುದ್ರಾಡಿ ಪೇಟೆಗೆ ನಡೆದುಕೊಂಡು ಹೋಗುವಾಗ ಭಕ್ರೆಮಠ ಕ್ರಾಸ್ ಮುಖ್ಯರಸ್ತೆ ತಲುಪುವಾಗ ಉಪ್ಪಳ ಕಡೆಯಿಂದ ಬೈಕ್ ಸವಾರ ಶೈಲೇಶ್ ಅತೀವೇಗವಾಗಿ ಬೈಕ್ ಚಲಾಯಿಸಿ ನಿಯಂತ್ರಣ ತಪ್ಪಿ ನಡೆದುಕೊಂಡು ಹೋಗುತ್ತಿದ್ದ ಅಣ್ಣಯ್ಯ ನಾಯ್ಕ್ ಅವರಿಗೆ ಡಿಕ್ಕಿ ಹೊಡೆದಿದ್ದಾನೆ. ಈ ಅಪಘಾತದಿಂದ ಅಣ್ಣಯ್ಯ ನಾಯ್ಕ್ ಅವರ ತಲೆ ಹಾಗೂ ಭುಜಕ್ಕೆ ಗಂಭೀರ ಗಾಯಗಳಾಗಿವೆ. ಬೈಕ್ ಸವಾರನ ನಿರ್ಲಕ್ಷö್ಯತನದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ