ಹೆಬ್ರಿ: ಮಾವಿನ ಮಿಡಿ ಕೊಯ್ಯಲೆಂದು ಮರ ಹತ್ತಿದ್ದ ವ್ಯಕ್ತಿಯೊಬ್ಬರು ಆಯತಪ್ಪಿ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟ ಘಟನೆ ವರಂಗ ಗ್ರಾಮದ ಮಾತಿಬೆಟ್ಟು ಎಂಬಲ್ಲಿ ಶುಕ್ರವಾರ ಸಂಭವಿಸಿದೆ.
ವರAಗ ಗ್ರಾಮದ ಮುನಿಯಾಲು ಸಮೀಪದ ಪಾದೆಮನೆ ನಿವಾಸಿ ಮಂಜುನಾಥ ನಾಯ್ಕ್(40) ಎಂಬವರು ಮೃತಪಟ್ಟ ದುರ್ದೈವಿ. ಅವರು ಶುಕ್ರವಾರ ಮಧ್ಯಾಹ್ನ ಮಾತಿಬೆಟ್ಟು ಎಂಬಲ್ಲಿ ಮಾವಿನ ಮಿಡಿ ಕೊಯ್ಯಲೆಂದು ಮರಕ್ಕೆ ಹತ್ತಿದ್ದ ವೇಳೆ ಆಯತಪ್ಪಿ ಬಿದ್ದು ತೀವೃವಾಗಿ ಗಾಯಗೊಂಡಾಗ ತಕ್ಷಣವೇ ಅವರನ್ನು ಉಡುಪಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ