ಮುಲ್ಕಿ: ಲಯನ್ಸ್ ಇಂಟರ್ನ್ಯಾಷನಲ್ 317ಡಿ ವತಿಯಿಂದ ಶಿಕ್ಷಕರಿಗೆ ಎರಡು ದಿನಗಳ ತರಬೇತಿ ಕಾರ್ಯಾಗಾರ (ಎಸ್ ಎಫ್ ಎ) ಮುಲ್ಕಿ ಲಯನ್ಸ್ ಸೌಧದಲ್ಲಿ ನಡೆಯಿತು.
ಮುಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಶೀತಲ್ ಸುಶೀಲ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಡಾ. ಹರಿಕೃಷ್ಣ ಪುನರೂರು ಮಾತನಾಡಿ, ವಿದ್ಯಾರ್ಥಿಗಳು ಡ್ರಗ್ಸ್ ಮತ್ತಿತರ ದುಷ್ಚಟಗಳಿಂದ ದೂರವಿದ್ದರೆ ದೇಶದ ಅಭಿವೃದ್ಧಿ ಸಾಧ್ಯವಾಗಿದ್ದು, ಭವ್ಯ ಭಾರತ ನಿರ್ಮಾಣ ಶಿಕ್ಷಕರಿಂದ ಸಾಧ್ಯ ಎಂದರು.
ಲಯನ್ ಮೆಲ್ವಿನ್ ಡಿಸೋಜಾ ಮಾತನಾಡಿ ಎಳವೆಯಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಮಾಜದಲ್ಲಿ ಉನ್ನತ ಸ್ಥಾನಕ್ಕಾಗಿ ಶ್ರಮಿಸುತ್ತಿರುವ ಶಿಕ್ಷಕರ ಪಾತ್ರ ಮಹತ್ವದ್ದು, ಮಹಿಳೆಯರಿಗೆ ಸಮಾನತೆಯ ಮೂಲಕ ನಾಯಕತ್ವ ನೀಡಿದರೆ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಖಂಡಿತ ಎಂದರು.

ಈ ಸಂದರ್ಭದಲ್ಲಿ ಲಯನ್ ಕವಿತಾ ಶಾಸ್ತ್ರಿ, ಕ್ಯಾಬಿನೆಟ್ ಸೆಕ್ರೆಟರಿ ಸುಧಾಕರ ಶೆಟ್ಟಿ, ಆರ್.ಸಿ. ಉಷಾ ಮನೋಜ್, ಝಡ್ ಸಿ ಸುಜಿತ್ ಸಾಲ್ಯಾನ್, ಮಂದಾಕಿನಿ, ಮಾಜಿ ಅಧ್ಯಕ್ಷೆ ನೀರಜಾ ಅಗರ್ವಾಲ್, ಶೋಭಾ ಸುಜಿತ್, ಲಿಯೋ ಸಿಯಾ ಸುಶೀಲ್, ಕವನ್ ಕುಬೆವೂರು, ಕಿಶೋರ್ ಶೆಟ್ಟಿ ಬಪ್ಪನಾಡು ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಾರ್ಯಗಾರದಲ್ಲಿ ಭಾಗವಹಿಸಿದ ಶಿಕ್ಷಕಿಯರನ್ನು ಗೌರವಿಸಲಾಯಿತು.

