ಮೂಲ್ಕಿ:ಪಕ್ಷಿಕೆರೆ ಕಾಪಿಕಾಡು ನಿವಾಸಿ ಬಡಕುಟುಂಬದ ರವಿ ತನ್ನ ತಂದೆ ತಾಯಿಗೆ ಆಧಾರಸ್ತಂಭವಾಗಿದ್ದು,ಕೆಲಸಕ್ಕೆ ತೆರಳಿದ್ದ ವೇಳೆ ರಕ್ತದೊತ್ತಡ ಕಡಿಮೆಯಾಗಿ ಅಲ್ಲೇ ಕುಸಿದು ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದು, ಇದೀಗ ಆಸ್ಪತ್ರೆಯ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.
ಅವರ ತಲೆಯ ಭಾಗದ ಸರ್ಜರಿ ನಡೆಸಬೇಕಾಗಿರುವ ಕಾರಣ ಲಕ್ಷಾಂತರ ರೂ. ಹಣದ ಅವಶ್ಯಕತೆಯಿದ್ದು ಅಷ್ಟು ದೊಡ್ಡ ಮೊತ್ತದ ಹಣ ಹೊಂದಿಸುವಲ್ಲಿ ಇವರ ತಂದೆ ತಾಯಿ ಅಶಕ್ತರಾಗಿದ್ದಾರೆ. ಆದ್ದರಿಂದ ಸುರಗಿರಿ ಶಿವಸಂಜೀವಿನಿಯ ವತಿಯಿಂದ ರವಿಯವರಿಗೆ ರೂ.25,000 ಸಹಾಯಧನವನ್ನು ವಿತರಿಸಲಾಯಿತು.