ಮೂಡುಬಿದಿರೆ: ಮೂಡುಬಿದಿರೆ ಪೇಟೆಯ ಪರಿಸರದಲ್ಲಿ ವಾಹನ ದಟ್ಟಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರತಿನಿತ್ಯ ಟ್ರಾಫಿಕ್ ಸಮಸ್ಯೆ ಬಿಗಡಾಯಿಸುತ್ತಿದೆ ಹಾಗೂ ವಾಹನ ಅಪಘಾತಗಳು ಸಂಭವಿಸುತ್ತಿದ್ದು ಈ ಸಮಸ್ಯೆ ತಪ್ಪಿಸಲು ಸ್ಪೀಡ್ ಬ್ರೇಕರ್ ಅಳವಡಿಸಬೇಕೆಂದು ಮೂಡಬಿದಿರೆ ನೇತಾಜಿ ಬ್ರಿಗೇಡ್ ವತಿಯಿಂದ ಮೂಡುಬಿದಿರೆ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಲಾಯಿತು.

ಮೂಡುಬಿದಿರೆ ಮೈಟ್ ಕಾಲೇಜಿನಿಂದ ಜೈನ್ ಪೇಟೆ ವರೆಗೆ ಸ್ಪೀಡ್ ಬ್ರೆಕರ್ ಅಳವಡಿಸುವಂತೆ ಹಾಗೂ ಮೂಡುಬಿದಿರೆ ತಾಲೂಕಿಗೆ ಪ್ರತ್ಯೇಕ ಟ್ರಾಫಿಕ್ ಕಂಟ್ರೋಲ್ ರೂಮ್ ಸ್ಥಾಪಿಸಲು ಕೋರಿ ಠಾಣಾಧಿಕಾರಿ ಸಿದ್ದಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ನೇತಾಜಿ ಬ್ರಿಗೇಡ್ ಸಂಚಾಲಕರಾದ ರಾಹುಲ್ ಕುಲಾಲ್ ಪಧಾಧಿಕಾರಿಗಳಾದ ಅಭಿಷೇಕ್ ಸಾಲ್ಯಾನ್,ಅನಂದ ಕುಲಾಲ್,ಸಂದೇಶ್ ಕುಂದರ್, ಶಿವಾನಂದ, ನಿತ್ಯಾನಂದ ಕುಲಾಲ್ ,ಯಶವಂತ ಮಾಸ್ತಿಕಟ್ಟೆ, ನಿತೇಶ್, ಶಿವಾನಂದ ಕೋಡಂಗಲ್ಲು,ನಿತ್ಯಾನಂದ, ಹಾಗೂ ಸಂಘಟನೆ ಸದಸ್ಯರುಗಳು ಉಪಸ್ಥಿತರಿದ್ದರು.


