ಮೂಡಬಿದಿರೆ : ಮೂಡಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳವಾಯಿ ಹಾಗೂ ಕೆಸರುಗದ್ದೆ ಎಂಬಲ್ಲಿ ಕಬ್ಬಿಣದ ಸೆಂಟ್ರಿಂಗ್ ಶೀಟ್, ಜಾಕ್ ಮತ್ತು ಪೈಪ್ ಗಳನ್ನು ಕಳವುಗೈದಿರುವ ಆರೋಪಿಯನ್ನು ಬಂಧಿಸುವಲ್ಲಿ ಮೂಡುಬಿದಿರೆ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ತೋಡಾರು ಹಿದಾಯತ್ ನಗರ ನಿವಾಸಿ ಮೊಹಮ್ಮದ್ ಸಾಹಿಲ್ (21 ವರ್ಷ) ಬಂಧಿತ ಆರೋಪಿ.ಆರೋಪಿಯಿಂದ ಕಳವುಗೈಯಲಾದ ಸುಮಾರು 2,50,000 ಮೌಲ್ಯದ ಕಬ್ಬಿಣದ ಸೆಂಟ್ರಿಂಗ್ ಶೀಟ್, ಜಾಕ್ ಮತ್ತು ಪೈಪ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಹಿಂದೆ ದಾಖಲಾದ ಕಳ್ಳತನ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಮೂಡುಬಿದಿರೆ ಪೊಲೀಸ್ ಠಾಣಾ ನಿರೀಕ್ಷಕರಾದ ಸಂದೇಶ್ ಪಿ. ಜಿ ಅವರು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮಾ ಅಗರ್ವಾಲ್, ಡಿಸಿಪಿ ಯವರಾದ ಸಿದ್ದಾರ್ಥ ಗೋಯಲ್ ಹಾಗೂ ದಿನೇಶ್ ಕುಮಾರ್ ಮತ್ತು ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ಮನೋಜ್ ಕುಮಾರ್ ನಾಯ್ಕ್ ರವರ ನಿರ್ದೇಶನದಂತೆ ಕಾರ್ಯಾಚರಣೆ ನಡೆಸಿ ಗುರುವಾರ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರ್ಯಾಚರಣೆಯಲ್ಲಿ ಮೂಡುಬಿದ್ರೆ ಮೂಡಬಿದ್ರೆ ಪೊಲೀಸ್ ಉಪನಿರೀಕ್ಷಕ ದಿವಾಕರ್ ರೈ, ಸಿದ್ದಪ್ಪ ನರನೂರ್ ಹಾಗೂ ಸಿಬ್ಬಂದಿಗಳಾದ ಮಹಮದ್ ಇಕ್ಬಾಲ್, ಮಹಮದ್ ಹುಸೇನ್, ಅಕೀಲ್ ಅಹಮದ್ ಹಾಗೂ ನಾಗರಾಜ್ ಸಹಕರಿಸಿದ್ದರು.








