ಮೂಡಬಿದಿರೆ :ನಮೋ ಫ್ರೆಂಡ್ಸ್ ಕ್ಲಬ್ ನೆತ್ತೋಡಿ ಇದರ ವತಿಯಿಂದ ವನಮಹೋತ್ಸವ ಪ್ರಯುಕ್ತ ಸರ್ಕಾರಿ ನೆತ್ತೋಡಿ ಶಾಲೆಯಲ್ಲಿ ಸಸಿ ನೆಡುವ ಮೂಲಕ ಶ್ರಮದಾನ ನಡೆಸಲಾಯಿತು.
ನಂತರ ತಂಡದ ವತಿಯಿಂದ ಶಾಲೆಗೆ ರೂ.15,000 ನಗದನ್ನು ದೇಣಿಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷ ಕಿರಣ್ ಸುವರ್ಣ, ಉಪಾಧ್ಯಕ್ಷ ಸುನಿಲ್, ಗೌರವ ಸಲಹೆಗಾರದ ಸಂಪತ್ ನೆತ್ತೋಡಿ ಹಾಗೂ ತಂಡದ ಸದಸ್ಯರು ಉಪಸ್ಥಿತರಿದ್ದರು.