ಮೂಡಬಿದಿರೆ: ದ. ಕ ಜಿಲ್ಲೆಯಲ್ಲಿ ಭಾರೀ ಮಳೆಯ ಹಿನ್ನಲೆ ಮಕ್ಕಳಿಗೆ ನಿರಂತರವಾಗಿ ರಜೆಯನ್ನು ಕೊಡುತ್ತಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರ ಭಾವಚಿತ್ರವನ್ನು ಗೋಡೆಗೆ ಅಂಟಿಸಿ ಪ್ರಶಂಸೆ ವ್ಯಕ್ತಪಡಿಸಿ ಪೂಜಿಸಿ ರೀಲ್ಸ್ ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮೂಡಬಿದ್ರೆಯ ವಿದ್ಯಾರ್ಥಿಗಳಾದ ಅಹಮದ್, ಮಹಮ್ಮದ್, ಹಾಗೂ ಸಾದ್ ಎಂಬ ವಿದ್ಯಾರ್ಥಿಗಳು ಗೋಡೆಯ ತುಂಬ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಭಾವಚಿತ್ರವನ್ನು ಅಂಟಿಸಿ ಸಿಹಿ ಮುತ್ತನ್ನು ಕೊಡುತ್ತಿದ್ದು, ಜಿಲ್ಲಾಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳ ಅತ್ಯುತ್ತಮ ಹೀರೋ ಆಗಿದ್ದಾರೆ.
ಜಿಲ್ಲಾಧಿಕಾರಿಗಳು ಮಳೆಯ ಹಿನ್ನೆಲೆಯಲ್ಲಿ ಮಕ್ಕಳಿಗೆ ನಿರಂತರವಾಗಿ ರಜೆ ಕೊಡುತ್ತಿದ್ದರು .ಆದರೆ ಮಕ್ಕಳಿಗೆ ದಿನಾಲೂ ರಜೆ ಕೊಡುವ ಜಿಲ್ಲಾಧಿಕಾರಿ ಬಹಳ ಅಚ್ಚುಮೆಚ್ಚು. ವಿದ್ಯಾರ್ಥಿಗಳಿಗೆ ರಜೆ ನೀಡಿದಷ್ಟು ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ. ಆದರೆ ಮಳೆ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿಯವರು ರಜೆ ಘೋಷಿಸಿದ್ದರು. ರಜೆಯಿಂದ ಮಕ್ಕಳು ಮಾತ್ರ ಸಂಭ್ರಮ ಪಡುತ್ತಿದ್ದು ಜಿಲ್ಲಾಧಿಕಾರಿಗಳ ಭಾವಚಿತ್ರವನ್ನು ಗೋಡೆಗೆ ಅಂಟಿಸಿ ಗೌರವ ದಿಂದ ಮುತ್ತಿನ ಮಳೆಗರೆದು ಸಂಭ್ರಮ ಪಡುತ್ತಿದ್ದಾರೆ.