ಮೂಡಬಿದಿರೆ: ಮೂಡಬಿದಿರೆ ಸ್ಫೂರ್ತಿ ವಿಶೇಷ ಮಕ್ಕಳ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಜೂನ್ 21ರಂದು ವಿಶೇಷ ಚೇತನ ಮಕ್ಕಳಿಂದ ಯೋಗಾಸನ ಕಾರ್ಯಕ್ರಮ ನಡೆಯಿತು.
ಶಾಲಾ ಶಿಕ್ಷಕರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು ಶಾಲೆಯ ಸಂಸ್ಥಾಪಕರಾದ ಪ್ರಕಾಶ್ ಜೆ ಶೆಟ್ಟಿಗಾರ್ ಪ್ರಸ್ತಾವಿಕವಾಗಿ ಮಾತಾಡಿ ಅತಿಥಿಗಳನ್ನು ಸ್ವಾಗತಿಸಿದರು ಶಿಕ್ಷಕಿ ಕು.ಸುಚಿತ್ರ ಕಾರ್ಯಕ್ರಮ ನಿರೂಪಣೆ ಮಾಡಿದರು ಮುಖ್ಯ ಶಿಕ್ಷಕಿ ಶರ್ಮಿಳಾ ವಾಸ್ ವಂದನಾರ್ಪಣೆಗ್ಯೆದರು ಆ ಬಳಿಕ ಮಕ್ಕಳಿಂದ ಯೋಗ ಕಾರ್ಯಕ್ರಮ ನಡೆಯಿತು ಅಲಂಕಾರ್ ಟೆಕ್ಸ್ ಟೈಲ್ ಮಾಲಕರಾದ ಹರ್ಮಾನ್ ಪಿಂಟೋ ಹಾಗೂ ಲಯನ್ಸ್ ಕ್ಲಬ್ ಅಲಂಗಾರ್ ವತಿಯಿಂದ ಮಕ್ಕಳಿಗೆ ಕೊಡೆ ಹಾಗೂ ಬಾತ್ ಟವೆಲ್ ವಿತರಿಸಿದರು ನಾಯಕ್ ಸಹೋದರರು ಮೂರುಕಾವೇರಿ ಇವರು ಮಕ್ಕಳಿಗೆ ಉಪಹಾರದ ವ್ಯವಸ್ಥೆ ಮಾಡಿದರು
ಕಾರ್ಯಕ್ರಮದಲ್ಲಿ ಪತಂಜಲಿ ಯೋಗ ಸಮಿತಿಯ ಮೂಡಬಿದ್ರಿ ವಲಯದ ಮುಖ್ಯಸ್ಥರಾದ ಶರತ್ ಕುಮಾರ್, ಮಾಡಬಿದ್ರಿಯ ನ್ಯಾಯವಾದಿ ಶಾಂತಿಪ್ರಸಾದ್ ಹೆಗ್ಡೆ, ಮೂಡಬಿದ್ರಿಯ ಅಲಂಕಾರ್ ಟೆಕ್ಸ್ ಟೈಲ್ ಇದರ ಮಾಲಕರಾದ ಹರ್ಮನ್ ಪಿಂಟೋ, ಲಯನ್ಸ್ ಕ್ಲಬ್ ಅಲಂಗಾರ್ ಇದರ ಅಧ್ಯಕ್ಷರಾದ ಲೋಯ್ಡ್ ರೆಗೋ ಹಾಗೂ ಪ್ರಾಣ ಹಿಲಿಂಗ್ ಸೆಂಟರ್ ಇದರ ವಿನೋದ್ ಬಜ್ಪೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು