ಮೂಡಬಿದಿರೆ: ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳ ಅವಧಿ ಮುಕ್ತಾಯವಾಗಿದ್ದು ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಎರಡನೆಯ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನಗಳಿಗೆ ಚುನಾವಣೆ ನಿಗದಿಪಡಿಸಿದ್ದಾರೆ.
ಮೂಡುಬಿದಿರೆ ತಾಲೂಕಿನ ಒಟ್ಟು 9 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದ್ದು ಆಗಸ್ಟ್ 17 ರಿಂದ ವಿವಿಧ ಹಂತಗಳಲ್ಲಿ ಚುನಾವಣೆ ನಡೆಯಲಿದೆ.

ಆಗಸ್ಟ್ 17ರಂದು ಪಾಲಡ್ಕ, ಪುತ್ತಿಗೆ, ಪಡುಮಾರ್ನಾಡು ಪಂಚಾಯಿತಿಗಳಿಗೆ ಚುನಾವಣೆ ನಡೆದರೆ, ಆಗಸ್ಟ್ 18ರಂದು ಧರೆಗುಡ್ಡೆ, ಕಲ್ಲಮುಂಡ್ಕೂರು, ತೆಂಕಮಿಜಾರು, ಆಗಸ್ಟ್ 19ರಂದು ನೆಲ್ಲಿಕಾರು ಬೆಳುವಾಯಿ ಹೊಸಬೆಟ್ಟು ಪಂಚಾಯಿತಿಗಳ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ ಉಳಿದಂತೆ ಇರುವ ಶಿರ್ತಾಡಿ, ವಾಲ್ಪಾಡಿ, ಪಂಚಾಯಿತಿಗಳ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ದಿನಾಂಕ ಇನ್ನಷ್ಟೇ ಪ್ರಕಟವಾಗಬೇಕಿದೆ.

ಲೋಕೋಪಯೋಗಿ ಸಹಾಯಕ ಇಂಜಿನಿಯರ್ ಶ್ರೀಕಾಂತ್ ಭಟ್ ಚುನಾವಣಾ ಅಧಿಕಾರಿಯಾಗಿದ್ದು, ನೆಲ್ಲಿಕಾರು, ಧರೆಗುಡ್ಡೆ, ಪಡು ಮಾರ್ನಾಡು ಪಂಚಾಯತ್ ಗಳಿಗೆ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ರಾಜಶ್ರೀ, ಪಾಲಡ್ಕ,ಬೆಳುವಾಯಿ, ಕಲ್ಲಮುಂಡ್ಕೂರು ಪಂಚಾಯಿತಿಗಳಿಗೆ ಪುರಸಭೆ ಅಧಿಕಾರಿ ಶಿವ ನಾಯ್ಕ್, ತೆಂಕಮಿಜಾರು, ಫುತ್ತಿಗೆ,ಹೊಸಬೆಟ್ಟು ಪಂಚಾಯತ್ ಗಳಿಗೆ ದೈಹಿಕ ಶಿಕ್ಷಣ ಪರಿವೀಕ್ಷಕ ನಿತ್ಯಾನಂದ ಶೆಟ್ಟಿ ಚುನಾವಣಾ ಅಧಿಕಾರಿಯಾಗಿ ಆಯ್ಕೆ ಪ್ರಕ್ರಿಯೆ ನಡೆಸಲಿದ್ದಾರೆ

