ಮೂಡಬಿದ್ರೆ: ಮೂಡಬಿದ್ರಿಯ ಸ್ಫೂರ್ತಿ ವಿಶೇಷ ಚೇತನ ಮಕ್ಕಳ ಶಾಲೆಯಲ್ಲಿ ನಡೆದ ಸ್ವಾತಂತ್ರ‍್ಯ ದಿನಾಚರಣೆಯು ಗಣ್ಯರ ಹಾಗೂ ಹಲವು ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಬಹಳ ವಿಶೇಷವಾಗಿ ನಡೆಯಿತು.
ಸರ್ವೋದಯ ಪ್ರೆಂಡ್ಸ್ ಬೆದ್ರ ಇದರ ಗೌರವಾಧ್ಯಕ್ಷ ರಂಜಿತ್ ಪೂಜಾರಿ ಬಾರ್ದಿಲ ದ್ವಜಾರೋಹಣವನ್ನು ನೆರವೇರಿಸಿದರು
ಈ ಸಂದರ್ಭದಲ್ಲಿ ಸರ್ವೋದಯ ಪ್ರೆಂಡ್ಸ್ ಬೆದ್ರ ಇದರ ಅಧ್ಯಕ್ಷರಾದ ಗುರು ದೇವಾಡಿಗ ಒಂಟಿಕಟ್ಟೆ, ಕಾರ್ಯದರ್ಶಿ ಗುರು ಅಂಚನ್, ಜವನೆರ್ ಬೆದ್ರ ಸಂಘಟನೆಯ ಸ್ಥಾಪಕಾಧ್ಯಕ್ಷ ಅಮರ್ ಕೋಟೆ, ಎನ್. ಎಸ್. ಯು. ಐ.ಇದರ ಅಧ್ಯಕ್ಷ ಶ್ರಾವಣ್ ಆಳ್ವ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಇದರ ತಾಲೂಕು ಘಟಕದ ಆದಿತ್ಯ, ಸ್ಫೂರ್ತಿ ಶಾಲಾ ಸಂಸ್ಥಾಪಕರಾದ ಪ್ರಕಾಶ್ ಜೆ ಶೆಟ್ಟಿಗಾರ್, ಶಾಲಾ ಶಿಕ್ಷಕ-ರಕ್ಷಕ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಲತಾ ಸುರೇಶ್ ಹಾಗೂ ಎಲ್ಲಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಶಾಲಾ ಹಿತೈಷಿಗಳು ಹಾಗೂ ಮಕ್ಕಳ ಪೋಷಕರು. ಉಪಸ್ಥಿತರಿದ್ದರು.
ದ್ವಜಾರೋಹಣದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಸರ್ವೋದಯ ಪ್ರೆಂಡ್ಸ್ ಬೆದ್ರ ಇದರ 15ನೇ ವರ್ಷದ ಪ್ರಯುಕ್ತ ಹೊಸ ಲಾಂಛನವನ್ನು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಮೂಡಬಿದ್ರಿಯ ಮೈಟ್ ವಿದ್ಯಾ ಸಂಸ್ಥೆಯ ವತಿಯಿಂದ ಸುಮಾರು 65000/- ರೂ. ಮೊತ್ತದ ಶಾಲೆಗೆ ಅಗತ್ಯವಿರುವ ವಸ್ತುಗಳನ್ನು ಮೈಟ್ ವಿದ್ಯಾಸಂಸ್ಥೆಯ ಪ್ರಾಂಶುಪಾಲರು, ಪ್ರಾಧ್ಯಪಕರು ಹಾಗೂ ಅಲ್ಲಿನ ಮಕ್ಕಳು ಸೇರಿ ಕೊಡುಗೆಯಾಗಿ ನೀಡಿದರು.
ಎನ್. ಎಸ್. ಯು. ಐ ವತಿಯಿಂದ ಮಕ್ಕಳಿಗೆ ಕಲಿಕಾ ಸಾಮಗ್ರಿ ಹಾಗೂ ಸಿಹಿತಿಂಡಿ. ಮೂಡಬಿದ್ರೆ ಪುರಸಭೆ ಹಾಗೂ ಅನೇಕ ದಾನಿಗಳು ಸಿಹಿತಿಂಡಿ ನೀಡಿ ಸಹಕರಿಸಿದರು ಸರ್ವೋದಯ ಪ್ರೆಂಡ್ಸ್ ಬೆದ್ರ ಇವರು ಉಪಹಾರದ ವ್ಯವಸ್ಥೆ ಹಾಗೂ ಶಾಲೆಗೆ ದೇಣಿಗೆಯನ್ನು ನೀಡಿ ಸಹಕರಿಸಿದರು.
ಶಿಕ್ಷಕಿ ನಳಿನಿ ಸ್ವಾಗತಿಸಿದರು. ಶಿಕ್ಷಕಿ ಕು. ಸಂಧ್ಯಾ ವಂದಿಸಿದರು. ಶಾಲಾ ಮುಖ್ಯ ಶಿಕ್ಷಕಿ ಶರ್ಮಿಳಾ ವಾಸ್ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ನಂತರ ಮಕ್ಕಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮ ನಡೆಯಿತು.





