Share this news

ಮೂಡುಬಿದಿರೆ: ಪಂಚಭೂತಾತ್ಮಕವಾದ ಪ್ರಪಂಚದಲ್ಲಿ ಬದುಕೆನ್ನುವುದು ಪ್ರವೃತ್ಯಾತ್ಮಕ ನೈಜ ಪ್ರವಾಹ ಚೇತನ ಅದರ ಕೇಂದ್ರ. ಕ್ಷಮೆ ಈ ಜೀವಕ್ಕೂಂದು ಶ್ರೇಷ್ಠ ಆಭರಣ ಇದ್ದ ಹಾಗೆ. ಆರ್ಜವ, ಶೌಚ, ಸತ್ಯ , ಸಂಯಮಗಳಿAದ ತಪ, ತ್ಯಾಗಗಳಿಂದ ಬದುಕು ಉಜ್ಜೀವನಕ್ಕೆ ದಾರಿ ಮಾಡಿಕೊಡುತ್ತದೆ. ಆದ್ದರಿಂದ ದಶಲಕ್ಷಣಗಳು ವ್ಯಕ್ತಿಯ ಜೀವನವನ್ನು ಮನಕಷಾಯದಿಂದ ದೂರ ಮಾಡಿ ಕಲ್ಯಾಣದತ್ತ ಒಯ್ಯುತ್ತದೆ ಎಂದು ಮೂಡುಬಿದಿರೆ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್ ಹೇಳಿದರು.
ಅವರು ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ನಡೆದ ದಶಲಕ್ಷಣ ಮಹಾಪರ್ವ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷ ಸ್ಥಾನದಲ್ಲಿ ಮಾತಾಡಿದರು.

ಇದೇ ಸಂದರ್ಭದಲ್ಲಿ ದಶಲಕ್ಷಣಗಳನ್ನು ಜೀವನದಲ್ಲಿ ಅನುಷ್ಠಾನಗೊಳಿಸಿದ್ದ ಹಿರಿಯರಾದ ಜಯರಾಜ ಕಂಬಳಿ ಅವರನ್ನು ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿಯವರಾದ ರಶ್ಮಿತಾ ಜೈನ್ ಪೂರ್ವಜನ್ಮದ ಪುಣ್ಯದಿಂದ ಸಿಕ್ಕ ಮಾನವ ಜನ್ಮವನ್ನು ಸಾರ್ಥಕಗೊಳಿಸುವಲ್ಲಿ ದಶಲಕ್ಷಣಗಳು ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತವೆ ಎಂದರು.
ಆಡಳಿತ ನಿರ್ದೇಶಕರಾದ ಡಾ.ಬಿ.ಪಿ. ಸಂಪತ್ ಕುಮಾರ್ ದಶಲಕ್ಷಣ ಮಾಹಾಪರ್ವದ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿ ಅತಿಥಿಗಳನ್ನು ಪರಿಚಯಿಸಿದರು.

ಉತ್ತಮ ಕ್ಷಮಾ ಮತ್ತು ಉತ್ತಮ ಮಾರ್ಧವದ ಕುರಿತಾಗಿ ಕು| ಮೌಲ್ಯ ವೈ.ಆರ್ ಜೈನ್, ಉತ್ತಮ ಆರ್ಜವ ಮತ್ತು ಉತ್ತಮ ಶೌಚ ದ ಕುರಿತು ಕು| ಐಶ್ವರ್ಯ ಜೈನ್, ಉತ್ತಮ ಸತ್ಯ ಮತ್ತು ಉತ್ತಮ ಸಂಯಮದ ಕುರಿತಾಗಿ ಕು| ಸಾಕ್ಷಿ ರಾಜೇಂದ್ರ ಕಾಗೆ, ಉತ್ತಮ ತಪ, ಉತ್ತಮ ತ್ಯಾಗದ ಕುರಿತಾಗಿ ಮಾ.ಪ್ರತ್ಯುಶ್ ಜೈನ್, ಉತ್ತಮ ಅಂಕಿಚನ್ಯ, ಉತ್ತಮ ಬ್ರಹ್ಮಚರ್ಯದ ಕುರಿತಾಗಿ ಕು|ಪನ್ನಗ ಜೈನ್ ವಿವರಿಸಿದರು.
ಅದ್ಯಾಪಕರ ಪಾಶ್ವನಾಥ ಜೈನ್ ನಿರೂಪಿಸಿ, ಉಪನ್ಯಾಸಕ ಸುನಾದ್ ರಾಜ್ ವಂದಿಸಿದರು.

 

 

 

 

 

Leave a Reply

Your email address will not be published. Required fields are marked *