ಮೂಡುಬಿದಿರೆ : ಮೂಡುಬಿದಿರೆಯಲ್ಲಿ ಶನಿವಾರ ಸಾರ್ವಜನಿಕ ಗಣೇಶೋತ್ಸವದ ವಿಸರ್ಜನಾ ಮೆರವಣಿಗೆ ಹಿನ್ನಲೆಯಲ್ಲಿ ವಾಹನಗಳ ಸಂಚಾರ ಮಾರ್ಗದಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ ಎಂದು ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ.ಅವರು ತಿಳಿಸಿದ್ದಾರೆ.
ಮಧ್ಯಾಹ್ನ 12 ಗಂಟೆಯಿಂದ ಗಣೇಶ ವಿಸರ್ಜನೆ ಆಗುವವರೆಗೆ ಮೂಡುಬಿದಿರೆ ಪೇಟೆಯಲ್ಲಿ ವಾಹನಗಳ ಸಂಚಾರ ಮಾರ್ಗದಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ.
ಬೆಳ್ತಂಗಡಿ ಕಡೆಯಿಂದ ಕಾರ್ಕಳ ಕಡೆ ಸಂಚರಿಸುವ ವಾಹನಗಳು ಮಹಾವೀರ ಕಾಲೇಜು ಬಳಿ ಬಲಕ್ಕೆ ತಿರುಗಿ ಕೋಟೆಬಾಗಿಲಿನಿಂದಾಗಿ ಸುಭಾಸ್ ನಗರ ದ್ವಾರದ ಬಳಿ ಬಲಕ್ಕೆ ತಿರುಗಿ ಅಮನೊಟ್ಟು ಕ್ರಾಸ್ ರಸ್ತೆ ಮೂಲಕ ಸಂಚರಿಸುವುದು.
ಬಂಟ್ವಾಳ ಕಡೆಯಿಂದ ಕಾರ್ಕಳ ಕಡೆಗೆ ಸಂಚರಿಸುವ ವಾಹನಗಳು ಕೀರ್ತಿ ನಗರ ಜಂಕ್ಷನ್ ನಿಂದ ಮಹಾವೀರ ಕಾಲೇಜು ಬಳಿ ಬಲಕ್ಕೆ ತಿರುಗಿ ಕೋಟೆಬಾಗಿಲುನಿಂದಾಗಿ ಸುಭಾಸ್ ನಗರ ದ್ವಾರದ ಬಳಿ ಬಲಕ್ಕೆ ತಿರುಗಿ ಅಮನೊಟ್ಟು ಕ್ರಾಸ್ ರಸ್ತೆ ಮೂಲಕ ಸಂಚರಿಸುವುದು.
ಶಿರ್ತಾಡಿ ಕಡೆಯಿಂದ ಮಂಗಳೂರು- ಮೂಲ್ಕಿ ಕಡೆ ಹೋಗುವ ವಾಹನಗಳು ಜೈನ್ ಪೇಟೆಯಿಂದ ಅಲಂಗಾರು ಮಾರ್ಗವಾಗಿ ರಿಂಗ್ ರೋಡ್ ಮುಖಾಂತರ ತೆರಳುವುದು.
ಕಾರ್ಕಳ ಕಡೆಯಿಂದ ಬೆಳ್ತಂಗಡಿ ಮತ್ತು ಬಿ.ಸಿ.ರೋಡ್ ಕಡೆಗೆ ಹೋಗುವ ವಾಹನಗಳು ಜೈನ್ ಪೇಟೆ ಕ್ರಾಸ್ ರಸ್ತೆ ಮೂಲಕ ಕೋಟೆಬಾಗಿಲು ಕೊಡಂಗಲ್ಲು ಜಂಕ್ಷನ್ ರಸ್ತೆ ಮೂಲಕ ಸಂಚರಿಸುವುದು.ಕಾರ್ಕಳ ಕಡೆಯಿಂದ ಮಂಗಳೂರು, ಮೂಲ್ಕಿ ಕಡೆಗೆ ಹೋಗುವ ವಾಹನಗಳು ಅಲಂಗಾರು ಜಂಕ್ಷನ್ ಬಳಿ ಬಲಕ್ಕೆ ತಿರುಗಿ ರಿಂಗ್ ರೋಡ್ ರಸ್ತೆಯಲ್ಲಿ ಸಂಚರಿಸುವುದು.
ಹಳೆ ಪೊಲೀಸ್ ಠಾಣೆಯಿಂದ ನಿಶ್ಮಿತಾ ಸರ್ಕಲ್ ವರೆಗೆ ಮುಖ್ಯ ರಸ್ತೆಯಲ್ಲಿ ನಾಳೆ ಮಧ್ಯಾಹ್ನ 12 ರಿಂದ ವಾಹನ ಸಂಚಾರ ನಿಷೇಧಿಸಲಾಗಿದೆ.
ಮಂಗಳೂರು ಕಡೆಯಿಂದ ಕಾರ್ಕಳ- ಕೊಡ್ಯಡ್ಕ ಕಡೆಗೆ ಹೋಗುವ ವಾಹನಗಳು ಸ್ವರಾಜ್ಯ ಮೈದಾನ,ರಿಂಗ್ ರೋಡ್ ನಲ್ಲಿ ಸಂಚರಿಸಿ ಅಲಂಗಾರು ಜಂಕ್ಷನ್ ಮೂಲಕ ಸಂಚರಿಸುವುದು
.ಮಂಗಳೂರಿನಿಂದ ಮೂಡುಬಿದಿರೆ ಕಡೆಗೆ ಬರುವ ವಾಹನಗಳು ವಿದ್ಯಾಗಿರಿಯ ಮಾಸ್ತಿಕಟ್ಟೆ ಕ್ರಾಸ್ ರಸ್ತೆ ಮಾರ್ಗವಾಗಿ ಲಾವಂತಬೆಟ್ಟು ರಸ್ತೆಯಲ್ಲಿ ಸಂಚರಿಸುವುದು.
ಗಣೇಶೋತ್ಸವಕ್ಕೆ ಆಗಮಿಸುವ ಭಕ್ತಾದಿಗಳ ವಾಹನಗಳಿಗೆ ತಾಲೂಕು ಆಫೀಸ್ ಮುಂಭಾಗದ ಗ್ರೌಂಡನ್ನು ತಾತ್ಕಾಲಿಕ ಪಾರ್ಕಿಂಗ್ ಸ್ಥಳವಾಗಿ ಕಲ್ಪಿಸಲಾಗಿದೆ ಎಂದು ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.