ಮೂಡುಬಿದಿರೆ: ನೇತಾಜಿ ಬ್ರಿಗೇಡ್ ಮೂಡುಬಿದಿರೆ ವತಿಯಿಂದ ದಕ್ಷಿಣ ಕನ್ನಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಡಂಗಲ್ಲು ನಲ್ಲಿ 128ನೇ ವಾರದ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯರಾದ ಮೇರಿ ಸೆಲಿನ್ ಡಿಸೋಜ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಬಿ. ನಝೀರ್ ಅಹಮದ್, ವಾರ್ಡ್ ಪ್ರಮುಖರಾದ ಶಶಿಕಿರಣ್, ಸ್ಥಳೀಯರಾದ ಅಮೃತ್ ಶೆಟ್ಟಿ, ಆಗಸ್ಟಿನ್, ಸಂತೋಷ್ ಶೆಟ್ಟಿ, ಲಕ್ಷ್ಮಿ ಶೆಟ್ಟಿ, ಶಾಲಾ ಹಳೆ ವಿದ್ಯಾರ್ಥಿಗಳು, ನೇತಾಜಿ ಬ್ರಿಗೇಡ್ ಸಂಚಾಲಕರು, ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.