ಮೂಡಬಿದಿರೆ: ಪಾಲಡ್ಕ ಗ್ರಾಮ ಪಂಚಾಯತ್ ವತಿಯಿಂದ ಕಡಂದಲೆ ಗ್ರಾಮ ಮತ್ತು ಪಾಲಡ್ಕ ಗ್ರಾಮಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು.
ಗ್ರಾ. ಪಂ ಅಧ್ಯಕ್ಷೆ ಅಮಿತಾ ನಾಯ್ಕ್, ಉಪಾಧ್ಯ ಪ್ರವೀಣ್ ಸಿಕ್ವೇರಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕು. ರಕ್ಷಿತಾ ಡಿ. ಮತ್ತು ಪಂಚಾಯತ್ ಎಲ್ಲಾ ಸಿಬ್ಬಂದಿಗಳು,ರಿಕ್ಷಾ ಮಾಲಕರು ಮತ್ತು ಚಾಲಕರು,ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಆಶಾಕಾರ್ಯಕರ್ತರು ಸ್ಥಳೀಯರು ಪಾಲ್ಗೊಂಡಿದ್ದರು.