ಮೂಡುಬಿದಿರೆ: ಸಾಮಾಜಿಕ ಧಾರ್ಮಿಕ ಸೇವಾ ಮನೋಭಾವನೆಯಿಂದ ಸಮಾಜ ಸೇವೆಯ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಸರ್ವೋದಯ ಫ್ರೆಂಡ್ಸ್ ಮೂಡುಬಿದಿರೆ 15 ವರ್ಷ ಪೂರೈಸಿದ ಸಂಭ್ರಮದಲ್ಲಿ ಇಂದು ಮೂಡಬಿದಿರೆಯ 60ನೇ ವರ್ಷದ ಗಣೇಶೋತ್ಸವದ ಗಣಪನಿಗೆ ಬೆಳ್ಳಿಯ ಕಬ್ಬು ಹಾಗೂ ಒಂದು ಜೊತೆ ಚಾಮರವನ್ನು ಸಮರ್ಪಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಗುರು ದೇವಾಡಿಗ, ಸಮಿತಿಯ ಗುರು ಅಂಚನ್, ಪ್ರಕಾಶ್ ಕುಂದರ್ ,ದಿವ್ಯ ವರ್ಮ ಬಲ್ಲಾಳ್, ಭವಿಷ್ಯತ್ ಕೋಟ್ಯಾನ್, ಚೇತನ್ ಪೇಟೆ ಮನೆ ,ರಂಜನ್ ರೈ ವಿಜೇತ್ ಆಚಾರ್ಯ ಅಕ್ಷಯ ಜೈನ್, ಹರೀಶ್ ಮೈದಾನ ಮನೋಹರ ದೀಪಕ್ ಕೊಲ್ಕೆ ಹಾಗೂ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.

























