ಮುಲ್ಕಿ: ಗಾಂಧೀಜಿ ಅಹಿಂಸಾ ತತ್ವದಿಂದ ದೇಶಕ್ಕೆ ಸ್ವಾತಂತ್ರ‍್ಯ ತಂದುಕೊಟ್ಟರು. ಇವರ ಹೋರಾಟ, ಸತ್ಯಾಗ್ರಹಗಳು ನಮ್ಮ ಜೀವನಕ್ಕೆ ಮಾದರಿಗಳು. ರಾಮ ರಾಜ್ಯದ ಕನಸು ನನಸು ಮಾಡಲು ನಾವೆಲ್ಲರೂ ಕಟಿಬದ್ಧರಾಗೋಣ ಎಂದು ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್ ಹೇಳಿದರು.
ಅವರು ಮುಲ್ಕಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಗಾಂಧಿ ಜಯಂತಿ ಕಾರ್ಯಕ್ರಮ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ನೆನಪು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕೆಪಿಸಿಸಿ ಸದಸ್ಯರಾದ ವಸಂತ್ ಬರ್ನಾಡ್ ಮಾತನಾಡಿ, ಗಾಂಧಿ ಕನಸು ನನಸು ಆಗಬೇಕಾದರೆ ರಾಹುಲ್ ಗಾಂಧಿಯವರು ಮುಂದಿನ ದಿನಗಳಲ್ಲಿ ದೇಶವನ್ನು ಆಳುವಂತಾಗಬೇಕು. ಕಾಂಗ್ರೆಸ್ ಶಕ್ತಿಯೇ ಇದಕ್ಕೆಲ್ಲ ಮೂಲ ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ಅಧ್ಯಕ್ಷೆ ಪದ್ಮಾವತಿ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರ್, ಉದ್ಯಮಿ ಶಶೀಂದ್ರ ಸಾಲಿಯಾನ್, ನಾಯಕರುಗಳಾದ ಮಂಜುನಾಥ ಕಂಬಾರ, ಉತ್ತಮ ಕುಮಾರ್, ಸತೀಶ್ ಕೋಟ್ಯಾನ್, ಅಬ್ದುಲ್ ಖಾದರ್, ಅಬ್ದುಲ್ ಅಜೀಜ್, ನೀತು ನಿರಂಜಲ, ಶಶಿಕಲಾ ಕರಿದೋಟ, ಕ್ಯಾರೋಲ್ ಕುಟಿನ್ಯೂ, ಬಶೀರ್ ಕುಳಾಯಿ, ಸುಬ್ಬು ಕೆ ಎಸ್ ನಗರ, ಮೊದಲಾದವರಿದ್ದರು.