ಮೂಲ್ಕಿ: ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ 2023-24ನೇ ಸಾಲಿನ ಅಧ್ಯಕ್ಷರಾಗಿ ಚಲನಚಿತ್ರ ನಟ,ನಿರ್ಮಾಪಕ ಡಾ.ರಾಜ್ ಶೇಖರ್ ಕೋಟ್ಯಾನ್ ಪುನರಾಯ್ಕೆಯಾಗಿದ್ದಾರೆ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಸಭಾಂಗಣದಲ್ಲಿ ನಡೆದ 2022 -23ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಡಾ. ರಾಜಶೇಖರ್ ಕೋಟ್ಯಾನ್ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.
ಇತರ ಪದಾದಿಕಾರಿಗಳು: ಉಪಾಧ್ಯಕ್ಷರುಗಳಾಗಿ ಸೂರ್ಯಕಾಂತ್ ಜಯ ಸುವರ್ಣ,ಹರೀಶ್ ಡಿ ಸಾಲ್ಯಾನ್ ಬಜಗೋಳಿ,ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಬಾಳ ಗಂಗಾಧರ ಪೂಜಾರಿ ಚೇಳ್ಯಾರು, ಜೊತೆ ಕಾರ್ಯದರ್ಶಿಗಳಾಗಿ ಗಣೇಶ್ ಪೂಜಾರಿ ಗಂಜಿಮಠ,ಶಿವಾಜಿ ಸುವರ್ಣ ಬೆಳ್ಳೆ, ಕೋಶಾಧಿಕಾರಿಯಾಗಿ ಕೆ. ಪ್ರಭಾಕರ ಬಂಗೇರ ಕಾರ್ಕಳ, ಜೊತೆ ಕೋಶಾಧಿಕಾರಿ ಗಣೇಶ ಎಲ್. ಪೂಜಾರಿ ಬೈಂದೂರು ಆಯ್ಕೆಯಾಗಿದ್ದಾರೆ.
ಚುನಾವಣಾ ಪ್ರಕ್ರಿಯೆಯನ್ನು ಚಂದ್ರಶೇಖರ ಸುವರ್ಣ ಮೈಸೂರು ಮತ್ತು ಹರಿಶ್ಚಂದ್ರ ಅಮೀನ್ ಕಟಪಾಡಿ ನಡೆಸಿಕೊಟ್ಟರು.