ಕಾರ್ಕಳ:ಬಹಳ ಪುರಾತನ ಕಾಲದಿಂದ ಕುರುಹಿನ ಶೆಟ್ಟಿ(ನೇಕಾರ ಶೆಟ್ಟಿ) ಸಮುದಾಯದವರು ಆರಾಧಿಸಿಕೊಂಡು ಬರುತ್ತಿರುವ ಕಾರ್ಕಳದ ಕೆಂಚಿರಾಯ ದೇವಸ್ಥಾನದ ಪುನಃ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವವು ಮೇ 20 ರಿಂದ 22ರವರೆಗೆ ನಡೆಯಲಿದೆ.
ಕಾರ್ಕಳ ಪುರಸಭಾ ವ್ಯಾಪ್ತಿಯ ರಥಬೀದಿಯ ಹಳೇ ಎಲೆಕ್ಟಿçಕ್ ರಸ್ತೆಯ ಹೊಂದಿಕೊAಡಿರುವ ಕೆಂಚಿರಾಯ ದೇವಸ್ಥಾನವು ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯ ಕುರುಹಿನ ಶೆಟ್ಟಿ ಸಮುದಾಯದವರು ಆರಾಧಿಸುವ ಏಕೈಕ ದೇವಸ್ಥಾನವಾಗಿದೆ.ಆಂಧ್ರಪ್ರದೇಶದ ಶ್ರೀಶೈಲಂನಲ್ಲಿ ನೇಕಾರ ವೃತ್ತಿ ಮಾಡುತ್ತಿದ್ದ ಕುರುಹಿನ ಶೆಟ್ಟಿ ಜನಾಂಗದವರು ಕೆಂಚಿರಾಯ(ಕಾಳಭೈರವ) ದೇವರ ಆರಾಧಕರಾಗಿದ್ದು,ಸುಮಾರು 200 ವರ್ಷಗಳ ಹಿಂದೆ ತಿರುಪತಿಯಿಂದ ಬೆಳ್ಳಿ ಗರುಡ ವಾಹನವನ್ನು ಗೆಜ್ಜೆ,ಆಯುಧ ಹಾಗೂ ಮುಖದ ರೂಪದಲ್ಲಿರುವ ಗುರಾಣಿ ಬಿಂಬವನ್ನು ಕಾರ್ಕಳಕ್ಕೆ ತಂದು ಬಳಿಕ ಹಳೇ ಎಲೆಕ್ಟಿçಕ್ ರಸ್ತೆಯ ಬಳಿಯ ಮರದ ಕೆಳಗೆ ಕಾಲಭೈರವ, ರಕ್ತಭೈರವ, ಆಕಾಶಭೈರವ, ಪಾತಾಳ ಭೈರವ, ಗೆಜ್ಜೆ ಭೈರವ ಸೇರಿದಂತೆ ಕೆಂಚಿರಾಯ ದೇವರ ವಾರ್ಷಿಕ ಆರಾಧನೆ ಮಾಡಿಕೊಂಡು ಬರಲಾಗುತ್ತಿತ್ತು.ತದನಂತರ ಈ ಸಾನಿಧ್ಯದಲ್ಲಿ ಗುಡಿಕಟ್ಟಿ ಸಂಕ್ರಮಣ ಪೂಜೆಯೊಂದಿಗೆ ಆರಾಧನೆ ನಡೆಯುತ್ತಿತ್ತು. ಕಾರ್ಕಳ ವೆಂಕಟರಮಣ ದೇವಸ್ಥಾನಕ್ಕೂ ಕೆಂಚಿರಾಯ ದೇವಸ್ಥಾನಕ್ಕೂ ನಂಟಿದ್ದು ,ಕೆಂಚಿರಾಯ ದೇವರ ದೀಪೋತ್ಸವದ ಸಂದರ್ಭದಲ್ಲಿ ವೆಂಕಟರಮಣ ದೇವರ ದರ್ಶನ ಪಡೆಯುವ ಸಂಪ್ರದಾಯವಿದೆ.

ಈ ದೇವಸ್ಥಾನವು ಶಿಥಿಲಾವಸ್ಥೆಯಲ್ಲಿ ಕಾರಣದಿಂದ ಜೀರ್ಣೋದ್ದಾರಗೊಳಿಸುವ ನಿಟ್ಟಿನಲ್ಲಿ ಆರೂಢ ತಾಂಬುಲ ಪ್ರಶ್ನೆಯಲ್ಲಿ ಕಂಡುಬAದ ಬಳಿಕ ದೇವಸ್ಥಾನವನ್ನು ಜೀರ್ಣೋದ್ದಾರಗೊಳಿಸುವ ನಿಟ್ಟಿನಲ್ಲಿ ಸಮುದಾಯದ ಮುಖಂಡರು ಜತೆಗೂಡಿ ಕೆಂಚಿರಾಯ ದೇವರಿಗೆ ಭವ್ಯವಾದ ಗುಡಿಯನ್ನು ನಿರ್ಮಾಣದ ಸಂಕಲ್ಪ ಮಾಡಿರುವ ಪರಿಣಾಮ ದೇವರಿಗೆ ನೂತನ ಗರ್ಭಗುಡಿ ನಿರ್ಮಾಣಗೊಂಡು ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಸಿದ್ದವಾಗಿದೆ.
ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಶ್ರೀನಿವಾಸ ಶೆಟ್ಟಿ, ಮೊಕ್ತೇಸರರಾದ ಜನಾರ್ಧನ ಶೆಟ್ಟಿ,ಸೀತಾರಾಮ ಶೆಟ್ಟಿ, ಜೀರ್ಣೋದ್ದಾರ ಸಮಿತಿಯ ಗೌರವಾಧ್ಯಕ್ಷ ಜಯಂತ ಶೆಟ್ಟಿ, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ವೆಂಕಟೇಶ ಶೆಟ್ಟಿ, ಉಪಾಧ್ಯಕ್ಷ ರಾಜೇಶ್ ಶೆಟ್ಟಿ, ಕಾರ್ಯದರ್ಶಿ ಪ್ರಶಾಂತ ಶೆಟ್ಟಿ ಹಾಗೂ ಪದಾಧಿಕಾರಿಗಳು ದೇವಸ್ಥಾನ ಜೀರ್ಣೋದ್ದಾರದಲ್ಲಿ ಭಾಗಿಗಳಾಗಿದ್ದಾರೆ.

ಮೇ 20ರಂದು ಕೊರಂಗ್ರಪಾಡಿ ಕೆ.ಪಿ ಕುಮಾರಗುರು ತಂತ್ರಿಗಳ ಹಾಗೂ ಪೆರ್ವಾಜೆ ವೆಂಕಟರಾಜ್ ಭಟ್ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳ ಆರಂಭಗೊಳ್ಳಲಿದ್ದು, ಮೇ 21ರಂದು ಭಾನುವಾರ ಬೆಳಗ್ಗೆ 7.45ಕ್ಕೆ ಕೆಂಚಿರಾಯ ದೇವರ ವಿಗ್ರಹದ ಪುನಃ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ನಡೆಯಲಿದೆ. ಬಳಿಕ ಮಧ್ಯಾಹ್ನ 3.30ಕ್ಕೆ ಮಹಾಪೂಜೆ ತೀರ್ಥ ಪ್ರಸಾದ ವಿತರಣೆ ಬಳಿಕ ಮೆರವಣಿಗೆಯಲ್ಲಿ ಹೊರಟು ರಾಮಸಮುದ್ರದಲ್ಲಿ ದೇವರ ಅವಭೃತ ಸ್ನಾನ, ತದನಂತರ ಪದ್ಮಾವತಿ ದೇವಸ್ಥಾನ ಮಣ್ಣಗೋಪುರ,ವೆಂಕಟರಮಣ ದೇವಸ್ಥಾನ ಹಾಗೂ ವೀರಮಾರುತಿ ದೇವಸ್ಥಾನಗಳಿಗೆ ಭೇಟಿ ನೀಡಿ ಗುಡಿಗೆ ಆಗಮಿಸಿದ ಬಳಿಕ ದೀಪೋತ್ಸವ ನಡೆಯಲಿದೆ. ಮೇ 22ರಂದು ಪುಣ್ಯಾಹವಾಚನದೊಂದಿಗೆ ಶುದ್ಧಪೂಜೆಯ ಬಳಿಕ ವಿಸರ್ಜನಾ ಪೂಜೆಯ ಮೂಲಕ ಸಂಪನ್ನಗೊಳ್ಳಲಿದೆ,.

