ಕಾರ್ಕಳ:ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾರ್ಕಳ ಕ್ಷೇತ್ರವು ಅತ್ಯಂತ ಜಿದ್ದಾಜಿದ್ದಿನ ಕಣವಾಗಿದ್ದು ಈ ಹಿನ್ನೆಲೆಯಲ್ಲಿ ಬಿಜೆಪಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಕರೆಸಿಕೊಳ್ಳುವ ಮೂಲಕ ಮತಬೇಟೆಗೆ ಭರ್ಜರಿ ತಂತ್ರಗಾರಿಕೆ ರೂಪಿಸಿದೆ.
ಮೇ 6ರಂದು ಶನಿವಾರ ಕಾರ್ಕಳದಲ್ಲಿ ಯೋಗಿ ಆದಿತ್ಯನಾಥ್ ಅವರ ಬೃಹತ್ ರೋಡ್ ಶೋ ನಡೆಯಲಿದ್ದು,
ಕಾರ್ಕಳಕ್ಕೆ ಮೊಟ್ಟಮೊದಲ ಬಾರಿಗೆ ಆಗಮಿಸುತ್ತಿರುವ ಅವರನ್ನು ನೋಡಲು ಜನಸಾಗರ ಸೇರುವ ನಿರೀಕ್ಷೆಯಿದೆ. ಶನಿವಾರ ಮಧ್ಯಾಹ್ನ 2.30ಕ್ಕೆ ಕಾರ್ಕಳ ನಗರದ ಅನಂತಶಯನ ವೃತ್ತದಿಂದ ರೋಡ್ ಶೋ ಆರಂಭಗೊಂಡು ಗಾಂಧಿಮೈದಾನದಲ್ಲಿ ಅಂತ್ಯಗೊಳ್ಳಲಿದೆ.
ಈ ಕಾರ್ಯಕ್ರಮಕ್ಕೆ ಸುಮಾರು25 ಸಾವಿರಕ್ಕೂ ಮಿಕ್ಕಿ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ತಿಳಿಸಿದ್ದಾರೆ.