ದಾವಣಗೆರೆ,ಡಿ.21: ಬಸನಗೌಡ ಪಾಟೀಲ್ ಯತ್ನಾಳ್ ಒಬ್ಬ ಹುಚ್ಚುನಾಯಿ ಇದ್ದಂತೆ, ಯತ್ನಾಳ್ ಬಗ್ಗೆ ಮಾತನಾಡುವುದಕ್ಕೂ ನನಗೆ ಅಸಹ್ಯವೆನಿಸುತ್ತದೆ. ನಾಯಿಗೆ ಇರುವ ನಿಯತ್ತೂ ಯತ್ನಾಳ್‌ಗೆ ಇಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹರಿಹಾಯ್ದಿದ್ದಾರೆ. ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆನೆ ಬೀದಿಗಿಳಿದಾಗ ಹುಚ್ಚು ನಾಯಿ ಬೊಗಳುತ್ತಿರುತ್ತದೆ. ಹಾಗೆ ನಾಯಿ ಬೊಗಳಿದರೆ ಆನೆಗೆ ಇರುವ ಆನೆ ತೂಕ ಕಡಿಮೆ ಆಗಲು ಸಾಧ್ಯವೇ ಎಂದು ಸರ್ವಜ್ಞನ ವಚನ ಹೇಳುತ್ತಲೇ ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದರು.
ವಿಜಯೇಂದ್ರ ಹಾಗೂ ಯಡಿಯೂರಪ್ಪಗೆ ಟೀಕೆ ಮಾಡಿದರೆ ಅದು ನರೇಂದ್ರ ಮೋದಿ ಸೇರಿ ಕೇಂದ್ರದ ನಾಯಕರನ್ನು ಟೀಕೆ ಮಾಡಿದಂತಾಗುತ್ತದೆ, ಯಡಿಯೂರಪ್ಪ ಆನೆ ಇದ್ದಂತೆ. ಬಿಎಸ್‌ವೈ ಬಗ್ಗೆ ಮಾತನಾಡೋರು ಹುಚ್ಚುನಾಯಿ ಇದ್ದಂತೆ. ಹುಚ್ಚುನಾಯಿ ಬಗ್ಗೆ ಮಾತನಾಡುವುದೂ ವ್ಯರ್ಥ. ಇನ್ನು ಆ ಹುಚ್ಚು ನಾಯಿ ಬಗ್ಗೆ ಮಾತನಾಡಬಾರದೆಂದುಕೊAಡಿದ್ದೇನೆ ಎಂದರು. ಶಿಕಾರಿಪುರದಲ್ಲಿ ವಿಜಯೇಂದ್ರಗೆ ಸೋಲಿಸಲು ಕುತಂತ್ರ ಮಾಡಿದವರು ಗೆದ್ದರೆ ದೊಡ್ಡ ನಾಯಕನಾಗುತ್ತಾನೆಂದು ಸೋಲಿಸಲು ಕುತಂತ್ರ ಮಾಡಿದ್ದರು. 2018ರಲ್ಲಿ ಸಚಿವ ಸ್ಥಾನ ನೀಡಲಿಲ್ಲವೆಂದು ಯತ್ನಾಳ್ ಹೀಗೆಲ್ಲ ಅಪಪ್ರಚಾರ ಮಾಡುತ್ತಿದ್ದಾರೆ. ಯತ್ನಾಳ್ ಗೆ ಹಿರಿತನ ಇದ್ದರೆ ಆತ ಇದೇ ರೀತಿ ಬೊಗಳುವುದೇ ಸೀನಿಯಾರಿಟಿಯಾ ಎಂದು ಪ್ರಶ್ನಿಸಿದ ಅವರು, ಯಡಿಯೂರಪ್ಪ, ವಿಜಯೇಂದ್ರ ಬಗ್ಗೆ ಯತ್ನಾಳ್‌ಗೆ ಯಾರು ಹೀಗೆಲ್ಲಾ ಬೊಗಳಲು ಹೇಳಿಕೊಟ್ಟಿದ್ದಾರೆಂದು ಹೇಳಲಿ ಎಂದು ಯತ್ನಾಳ್ ವಿರುದ್ಧ ಹರಿಹಾಯ್ದರು.
ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಇಳಿಸಿದ್ದು ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಕಾರಣವಾಗಿದೆ. ಅಲ್ಲದೆ ಪಕ್ಷದ ಸೋಲಿಗೆ ನೀವು ನಿರಂತರವಾಗಿ ಮಾತನಾಡಿದ್ದೂ ಒಂದು ಕಾರಣ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ
ನೀವು ಈಗಾಗಲೇ ಶಿಕ್ಷಣ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿ ಇದ್ದೀರಾ? ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ