ಮುರ್ಷಿದಾಬಾದ್(ಪಶ್ಚಿಮ ಬಂಗಾಳ): ರೀಲ್ಸ್ ಹುಚ್ಚು ಎಲ್ಲಿಯವರೆಗೆ ತಲುಪಿದೆ ಎಂದರೆ ಕೆಲವರು ಊಟವನ್ನಾದರೂ ಬಿಡಬಹುದು ಆದರೆ ರೀಲ್ಸ್ ಮಾಡೋದನ್ನು ಬಿಡಲಾರರು,ಮದುವೆ ಮನೆಯಲ್ಲಿ ರೀಲ್ಸ್, ಸಾವಿನ ಮನೆಯಲ್ಲೂ ರೀಲ್ಸ್, ಮಸಣದಲ್ಲೂ ರೀಲ್ಸ್ ಮಾಡುವ ಹುಚ್ಚಾಟ ಮೇರೆ ಮೀರಿದೆ. ಎಷ್ಟೋ ಸಲ ಅತಿಯಾದ ರೀಲ್ಸ್ ಹುಚ್ಚಿನಿಂದ ಯುವಕ ಯುವತಿಯರು ಪ್ರಾಣವನ್ನು ಕಳೆದುಕೊಂಡ ಉದಾಹರಣೆಗಳಿವೆ.
ಅತಿಯಾದ ರೀಲ್ಸ್ ಗೀಳಿನಿಂದ ಮೂವರು ಯುವಕರು ರೈಲಿಗೆ ಸಿಲುಕಿ ಭೀಕರವಾಗಿ ಮೃತಪಟ್ಟ ದಾರುಣ ಘಟನೆ ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದೆ,ಪಶ್ಚಿಮ ಬಂಗಾಳದ ಮಾಲ್ಡಾದ ಸ್ಥಳೀಯ ರೈಲ್ವೇ ನಿಲ್ದಾಣಗಳ ನಡುವೆ ಈ ಘಟನೆ ನಡೆದಿರುವುದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ರೈಲ್ವೆ ಸೇತುವೆಯ ಮೇಲೆ ರೀಲ್ಸ್ ಮಾಡುತ್ತಿದ್ದಾಗ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದಿದೆ. ಬುಧವಾರ ಈ ಮಾಹಿತಿ ನೀಡಿದ ಅಧಿಕಾರಿಯೊಬ್ಬರು, ಮೃತರ ಸ್ನೇಹಿತರಿಬ್ಬರು ಕೊನೆಯ ಕ್ಷಣದಲ್ಲಿ ನದಿಗೆ ಹಾರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದರು.
ಮಾಲ್ಡಾ ವಿಭಾಗದ ಅಜಿಮ್‌ಗಂಜ್-ನ್ಯೂ ಫರಕ್ಕಾ ವಿಭಾಗದ ಸುಜ್ನಿಪಾರಾ ಮತ್ತು ಅಹಿರೋನ್ ನಿಲ್ದಾಣಗಳ ನಡುವಿನ ರೈಲ್ವೆ ಸೇತುವೆಯ ಮೇಲೆ ಹಳಿಗಳ ಮೇಲೆ ನಿಂತು ರೀಲ್ಸ್ ಮಾಡುತ್ತಿದ್ದಾಗ 13053 ಹೌರಾ-ರಾಧಿಕಪೂರ್ ಕುಲಿಕ್ ಎಕ್ಸ್‌ಪ್ರೆಸ್ ರೈಲು ಮೂವರು ಯುವಕರು ಡಿಕ್ಕಿ ಹೊಡೆದಿದೆ ಎಂದು ಇಆರ್ ಅಧಿಕಾರಿ ತಿಳಿಸಿದ್ದಾರೆ.
ನೀವು ಈಗಾಗಲೇ ಶಿಕ್ಷಣ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿ ಇದ್ದೀರಾ? ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ