ಬೆಂಗಳೂರು: ಇತ್ತೀಚಿಗಿನ ದಿನಗಳಲ್ಲಿ ಯುವಜನರಲ್ಲಿ ಹೃದಯ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದ್ದು ಮಾತ್ರವಲ್ಲದೇ ತೀವೃ ಹೃದಯಘಾತದಿಂದ ಸಾವುಗಳು ಸಂಭವಿಸುತ್ತಿರುವ ಹಿನ್ನಲೆಯಲ್ಲಿ ಹೃದಯಾಘಾತವನ್ನು ತಡೆಗಟ್ಟಲು ಸರ್ಕಾರ ಮುಂದಾಗಿದೆ. ಹೃದಯಾಘಾತವನ್ನು ತಡೆಗಟ್ಟಲು ಆರೋಗ್ಯ ಇಲಾಖೆಯು ಪುನೀತ್ ರಾಜಕುಮಾರ್ ಹೆಸರಿನಲ್ಲಿ ಅಪ್ಪು ಹೃದಯ ಕವಚ ಯೋಜನೆ ಜಾರಿಗೊಳಿಸಲು ನಿರ್ಧರಿಸಿದೆ.
ಹೃದಯಾಘಾತದಿಂದ ಹಠಾತ್ ಸಂಭವಿಸುತ್ತಿರುವ ಹಿನ್ನಲೆಯಲ್ಲಿ ಹೃದಯಾಘಾತವನ್ನು ತಪ್ಪಿಸಲು ಮುಂದಾದ ಆರೋಗ್ಯ ಹೃದಯಘಾತಕ್ಕೂ ಮುನ್ನ ಯಾವ ರೀತಿ ಪ್ರಾಥಮಿಕ ಚಿಕಿತ್ಸೆ ಪಡೆದುಕೊಳ್ಳಬೇಕು ಎಂಬುದರ ಕುರಿತು ಅರಿವು ಮೂಡಿಸುವುದು ಈ ಯೋಜನೆಯಲ್ಲಿದೆ.ಅಪ್ಪು ಹೃದಯ ಕವಚ ಯೋಜನೆ ಜಾರಿ ಮಾಡಲಾಗಿದ್ದು ಈ ಕುರಿತು ಜಯದೇವ ಆಸ್ಪತ್ರೆಯ ಅಡಿಯಲ್ಲಿ 45 ತಾಲೂಕು ಆಸ್ಪತ್ರೆಗಳಲ್ಲಿ ಈ ಚಿಕಿತ್ಸೆ ನೀಡಲು ಯೋಜನೆ ಹಾಕಿಕೊಳ್ಳಲಾಗಿದೆ
ಹೃದಯಾಘಾತ ತಡೆಗಟ್ಟಲು ಪುನೀತ್ ಹೆಸರಲ್ಲಿ ಎಇಡಿ(ಆಟೋಮೆಟಿಕ್ ಎಕ್ಸ್ಟರ್ನಲ್ ಡೆಫಿಲೆಟರ್ಸ್) ಅಳವಡಿಸಲಾಗುತ್ತಿದ್ದು, ಸುಮಾರು ಮೂರು ಕೋಟಿ ವೆಚ್ಚದಲ್ಲಿ ಆಸ್ಪತ್ರೆಗಳಲ್ಲಿ ಆಧುನಿಕ ಎಇಡಿಗಳನ್ನು ಅಳವಡಿಕೆ ಮಾಡಲಾಗಿದೆ. ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಹೆಸರಲ್ಲಿ ಅಳವಡಿಕೆ ಮಾಡಿದ್ದು, ಆರಂಭಿಕ ಹಂತದಲ್ಲಿ 45 ಆಸ್ಪತ್ರೆಯಲ್ಲಿ ಎಇಡಿ ಮಾಡೆಲ್ ಅಳವಡಿಕೆ ಈ ಬಗ್ಗೆ ಬಜೆಟ್ ನಲ್ಲಿ ಸಿದ್ದರಾಮಯ್ಯನವರು ಘೋಷಿಸಿದ್ದರು. ಸರ್ಕಾರಿ ಆಸ್ಪತ್ರೆಗಳಲ್ಲಿ ಎಇಡಿ ಅಳವಡಿಕೆಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ.
ಎಇಡಿ ಯಂತ್ರವು ಎಲೆಕ್ಟ್ರಿಕ್ ಶಾಕ್ ಮೂಲಕ ಹೃದಯ ಬಡಿತದ ತೀವೃತೆಯನ್ನು ಸಾಮಾನ್ಯ ಸ್ಥಿತಿಗೆ ಬರುವಂತೆ ಮಾಡುತ್ತದೆ. ತುರ್ತು ಪ್ರಾಥಮಿಕ ಚಿಕಿತ್ಸೆ ಬಳಿಕ ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡಬಹುದಾಗಿದೆ.ಹೃದಯ ನಾರ್ಮಲ್ ಆಗಿ ಒಂದು ನಿಮಿಷಕ್ಕೆ 75 ರಿಂದ 80 ವರೆಗೆ ಬಡಿದುಕೊಳ್ಳುತ್ತದೆ. ಅದು ತಕ್ಷಣವಾಗಿ 300 ರಿಂದ 400ಕ್ಕೆ ಏರಿಕೆಯಾದರೆ ಅಲ್ಲಿ ಹೃದಯದ ಬಡಿತ ಕಂಪನ ಉಂಟಾಗುತ್ತದೆ. ಆ ಸಂದರ್ಭದಲ್ಲಿ ಅಂತಹ ವ್ಯಕ್ತಿ ಬೆವರುತ್ತಿರುತ್ತಾರೆ. ಅವರ ಕೈ ಹಾಗೂ ದೇಹ ತಣ್ಣಗಿನ ಸ್ಥಿತಿಯಲ್ಲಿರುತ್ತದೆ. ಎಇಡಿ ಯಂತ್ರವನ್ನು ವ್ಯಕ್ತಿಯ ಎದೆಯ ಮೇಲೆ ಇಟ್ಟರೆ ತಕ್ಷಣ 300 ರಿಂದ 400 ವರೆಗಿನ ಹೃದಯ ಬಡಿತ ಸಹಜ ಸ್ಥಿತಿಗೆ ಬರುತ್ತದೆ ಎಂದು ಜಯದೇವ ಆಸ್ಪತ್ರೆಯ ಹೃದಯ ತಜ್ಞ ಡಾ.ಅರುಣ್ ಮಾಹಿತಿ ನೀಡಿದ್ದಾರೆ.