Share this news

ಕಾರ್ಕಳ: ನವರಾತ್ರಿ ಹಾಗೂ ದಸರಾ ಹಬ್ಬದ ಪ್ರಯುಕ್ತ ಕಾರ್ಕಳದ ಜೋಡುರಸ್ತೆಯ ಶ್ರೀ ದುರ್ಗಾ ಎಲೆಕ್ಟ್ರಾನಿಕ್ಸ್& ಫರ್ನಿಚರ್ಸ್ ನಲ್ಲಿ ಅಕ್ಟೋಬರ್ 22ರಂದು ರಂಗೋಲಿ‌ ಸ್ಪರ್ಧೆ ಏರ್ಪಡಿಸಲಾಗಿದೆ.

ಈ ರಂಗೋಲಿ ಸ್ಪರ್ಧೆಯಲ್ಲಿ ಮೊದಲು ನೋಂದಾಯಿಸಿದ 20 ಜನ ಸ್ಪರ್ಧಿಗಳಿಗೆ ಮಾತ್ರ ಅವಕಾಶವಿದ್ದು, ಪ್ರಥಮ ಬಹುಮಾನವಾಗಿ ರೂ 3 ಸಾವಿರ, ದ್ವೀತಿಯ ಬಹುಮಾನವಾಗಿ ರೂ 2 ಸಾವಿರ ಹಾಗೂ ತೃತೀಯ ಬಹುಮಾನವಾಗಿ 1ಸಾವಿರ ರೂ ನಗದು ನೀಡಲಾಗುವುದು.ಇದಲ್ಲದೇ ಭಾಗವಹಿಸಿದ ಎಲ್ಲರಿಗೂ ಸಮಾಧಾನಕರ ಬಹುಮಾನ ನೀಡಲಾಗುವುದು.

ಅಕ್ಟೋಬರ್22 ರಂದು ಭಾನುವಾರ ಸಂಜೆ 6 ರಿಂದ 7 ಗಂಟೆವರೆಗೆ ರಂಗೋಲಿ ಸ್ಪರ್ಧೆ ನಡೆಯಲಿದ್ದು, ಆಸಕ್ತರು ಅ.18 ಬುಧವಾರ ಸಂಜೆಯೊಳಗೆ ಹೆಸರು ನೊಂದಾಯಿಸಬಹುದಾಗಿದೆ.
ಹೆಸರು ನೊಂದಾಯಿಸಲು ಹಾಗೂ ಮಾಹಿತಿಗಾಗಿ 7795953036/9483509264 ಗೆ ಸಂಪರ್ಕಿಸಬಹುದು.

 

 

 

 

 

 

 

 

Leave a Reply

Your email address will not be published. Required fields are marked *