ಬೆಂಗಳೂರು : ಬೆಂಗಳೂರು : ರಾಜ್ಯದ ಎಲ್ಲಾ ಸರ್ಕಾರಿ/ಖಾಸಗಿ ಆಸ್ಪತ್ರೆಗಳಲ್ಲಿ ಮರಣ ಪ್ರಮಾಣ ಪತ್ರದಲ್ಲಿ `ಮರಣ ಕಾರಣ’ ಭರ್ತಿ ಮಾಡುವುದು ಕಡ್ಡಾಯ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಎಲ್ಲಾ ವೈದ್ಯರು/ವೈದ್ಯ ವೃತ್ತಿಪರರು ಉಪಚರಿಸಿದ ವ್ಯಕ್ತಿಯು ಮೃತನಾದಲ್ಲಿ ಮೃತ ವ್ಯಕ್ತಿಯ ಮರಣ ಕಾರಣವನ್ನು ಮರಣ ಕಾರಣ ವೈದ್ಯಕೀಯ ಪಮಾಣ ಪತ್ರ (ನಮೂನೆ-4/4ಎ) ರಲ್ಲಿ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ ಜನನ, ಮರಣ ಮುಖ್ಯ ನೋಂದಣಾಧಿಕಾರಿಗಳ ಕಛೇರಿಗೆ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಜನನ, ಮರಣಗಳ ನೋಂದಣಿ ಅಧಿನಿಯಮ 1969ರ ಪ್ರಕರಣ 10(3) ರನ್ವಯ ಎಲ್ಲಾ ವೈದ್ಯರು/ವೈದ್ಯ ವೃತ್ತಿಪರರು ಉಪಚರಿಸಿದ ವ್ಯಕ್ತಿಯು ಮೃತನಾದಲ್ಲಿ ಮೃತ ವ್ಯಕ್ತಿಯ ಮರಣ ಕಾರಣವನ್ನು ಮರಣ ಕಾರಣ ವೈದ್ಯಕೀಯ ಪಮಾಣ ಪತ್ರ (ನಮೂನೆ-4/4ಎ) ರಲ್ಲಿ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ ಜನನ, ಮರಣ ಮುಖ್ಯ ನೋಂದಣಾಧಿಕಾರಿಗಳ ಕಛೇರಿಗೆ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.

ಮರಣ ಕಾರಣಗಳ ಸಂಗ್ರಹಣೆ ಮತ್ತು ವಿಶೇಷಣೆಯ ಮಾಹಿತಿಯು ಸರ್ಕಾರಕ್ಕೆ, ಆರೋಗ್ಯ ಸಂಶೋಧಕರಿಗೆ ಹಾಗೂ ನೀತಿ ರೂಪಣೆ ಕಾರ್ಯಗಳಲ್ಲಿ ವಿವಿಧ ತೀರ್ಮಾನಗಳನ್ನು / ಕ್ರಮಗಳನ್ನು ಕೈಗೊಳ್ಳಲು ಅವಶ್ಯಕವಿರುವ ಹಿನ್ನೆಲೆಯಲ್ಲಿ ಉಲ್ಲೇಖಿತ ಸಭೆಯಲ್ಲಿ ರಾಜ್ಯದ ಎಲ್ಲಾ ಸರ್ಕಾರಿ/ಖಾಸಗಿ ಆರೋಗ್ಯ ಸಂಸ್ಥೆಗಳಲ್ಲಿ ಸಂಭವಿಸುವ ಎಲ್ಲಾ ಮರಣಗಳಿಗೂ ಮರಣ ಕಾರಣಗಳನ್ನು ಸಂಗ್ರಹಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ KPME ಕಾಯ್ದೆಯಡಿ ನೋಂದಣಿಯಾಗಿರುವ ಎಲ್ಲಾ ಖಾಸಗಿ ಆಸ್ಪತ್ರೆಗಳಿಗೂ ಇ-ಜನ್ಮ ತಂತ್ರಾಂಶದಲ್ಲಿ ಮರಣ ಘಟನೆಯ ಮಾಹಿತಿಯನ್ನು ದಾಖಲಿಸಲು User Id and Password ನೀಡಲು ಕ್ರಮವಹಿಸಲು ಹಾಗೂ ಎಲ್ಲಾ ಆರೋಗ್ಯ ಸಂಸ್ಥೆಗಳಲ್ಲಿ ಸಂಭವಿಸುವ ಪ್ರತಿ ಮರಣಗಳಿಗೆ “ನಮೂನೆ-4 ರಲ್ಲಿ ಸಾಂಸ್ಥಿಕ ಮರಣಗಳಿಗೆ (Institutional Death) ಮತ್ತು “ನಮೂನೆ-4ಎ” ನಲ್ಲಿ ಸಂಸ್ಥೆಯೇತರ ಮರಣಗಳಿಗೆ (Non Institutional Death) ಭರ್ತಿ ಮಾಡಿ ಜನನ, ಮರಣ ಮುಖ್ಯ ನೋಂದಣಾಧಿಕಾರಿಗಳ ಕಛೇರಿಗೆ ಸಲ್ಲಿಸಲು ಕಮವಹಿಸಲು ಸೂಚನೆ ನೀಡಿದೆ.

