Share this news

ಬೆಂಗಳೂರು: ರಾಜ್ಯ ವಿಧಾನಸಭೆಗೆ ಚುನಾವಣೆ ಘೋಷಣೆಗೂ ಮುನ್ನವೇ ಸರ್ಕಾರದಿಂದ ರಾಜ್ಯದ ವಿವಿಧ 38 ದೇವಾಲಯಗಳ ದುರಸ್ತಿ, ಜೀರ್ಣೋದ್ಧಾರ, ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ 298 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ.

ಈ ಬಗ್ಗೆ ದಿನಾಂಕ 28-03-2023ರಂದು ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕೆ.ಪಿ ಹೇಮಂತರಾಜು ನಡವಳಿಯನ್ನು ಹೊರಡಿಸಿದ್ದು, 2022-23ನೇ ಅಯವ್ಯಯದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಧಾರ್ಮಿಕ ದತ್ತಿ ಇಲಾಖೆಯ ದೇವಾಲಯ, ಧಾರ್ಮಿಕ ಸಂಸ್ಥೆಗಳ ಅಭಿವೃದ್ಧಿ, ದುರಸ್ಥಿ, ಜೀರ್ಣೋದ್ಧಾರ ಕಾಮಗಾರಿಗಳಿಗೆ ರೂ.298 ಲಕ್ಷವನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಧಾರ್ಮಿಕ ಸಂಸ್ಥೆಗಳಿಗೆ ಮಂಜೂರು ಮಾಡಲಾದ ಅನುದಾನವನ್ನು ಖಜಾನೆ-2 ಮುಖಾಂತರ ಜಿಲ್ಲಾಧಿಕಾರಿಗಳ ಡಿಡಿಓ ಸಂಕೇತಕ್ಕೆ ಅಪ್ ಲೋಡ್ ಮಾಡುವುದು. ಸಂಬAಧ ಪಟ್ಟ ಜಿಲ್ಲಾಧಿಕಾರಿಗಳು ಖಜಾನೆ-2ರಡಿ ನಿಯಮಾನುಸಾರ ಅನುದಾವನ್ನು ಡ್ರಾ ಮಾಡಿ, ಜಿಲ್ಲಾಧಿಕಾರಿಗಳು ನಿರ್ಧಿರಿಸುರವ ಅನುಷ್ಠಾನ ಇಲಾಖೆ(ಏಜೆನ್ಸಿ) ಮೂಲಕ ಉದ್ದೇಶಿತ ಕಾಮಗಾರಿಗಳನ್ನು ನಿರ್ವಹಿಸುವುದು ಎಂದು ತಿಳಿಸಿದೆ.

ಅನುದಾನ ಬಿಡುಗಡೆ ಮಾಡಿರುವ ಸಂಸ್ಥೆಯು ನಿಯಮಾನುಸಾರ ನೀಡಬಹುದಾದ ಮೊತ್ತದ ಮುಂಗಡ ರಶೀದಿ ಪಡೆದು, ಖಜಾನೆ-2ರ ಅಡಿ ಬಿಲ್ಲು ತಯಾರಿಸಿ ಪಾವತಿಸುವುದು. ಉದ್ದೇಶಿತ ಕಾಮಗಾರಿಗಳ ಅಂದಾಜುಪಟ್ಟಿಗೆ ಸಂಬAಧಪಟ್ಟ ಸಕ್ಷಮ ಪ್ರಾಧಿಕಾರದಿಂದ ತಾಂತ್ರಿಕ ಮತ್ತು ಆಡಳಿತಾತ್ಮಕ ಅನುಮೋದನೆ ಪಡೆಯತಕ್ಕದ್ದು ಎಂದು ಷರತ್ತಿನಲ್ಲಿ ತಿಳಿಸಿದ್ದಾರೆ.

 

 

Leave a Reply

Your email address will not be published. Required fields are marked *