ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಈಗಾಗಲೇ ಸಿದ್ಧತೆ ನಡೆಸುತ್ತಿದ್ದು,ಪ್ರತೀ ಲೋಕಸಭಾ ಕ್ಷೇತ್ರದಲ್ಲಿ ತಳಮಟ್ಟದಿಂದ ಪಕ್ಷ ಸಂಘಟಿಸುವ ನಿಟ್ಟಿನಲ್ಲಿ ಕೆಪಿಸಿಸಿ ವತಿಯಿಂದ ಹಾಲಿ ಸಚಿವರನ್ನೇ ಲೋಕಸಭಾ ಕ್ಷೇತ್ರಗಳಿಗೆ ಜಿಲ್ಲಾ ಸಂಯೋಜಕರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಈ ಕುರಿತು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಆದೇಶ ಹೊರಡಿಸಿದ್ದು, ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಜತೆ ಸಮಾಲೋಚನೆ ನಡೆಸಿ, ಎಐಸಿಸಿ ಅನುಮೋದಿಸಿರುವ ಕರ್ನಾಟಕದ ಲೋಕಸಭಾ ಕ್ಷೇತ್ರವಾರು ಸಂಯೋಜಕರ ಪರಿಷ್ಕೃತ ಪಟ್ಟಿಯನ್ನು ಮಂಗಳವಾರ ಪ್ರಕಟಿಸಿದ್ದಾರೆ.
ಹೀಗಿದೆ ಜಿಲ್ಲಾ ಸಂಯೋಜಕರಾಗಿ ನೇಮಕಗೊಂಡ ಸಚಿವರ ಪಟ್ಟಿ ಇಂತಿದೆ:
ಬಾಗಲಕೋಟೆ-ಆರ್.ಬಿ ತಿಮ್ಮಾಪುರ್
ಬೆಂಗಳೂರು ಕೇಂದ್ರ – ಜಮೀರ್ ಅಹ್ಮದ್ ಖಾನ್
ಬೆಂಗಳೂರು ಉತ್ತರ – ಕೃಷ್ಣಬೈರೇಗೌಡ
ಬೆಂಗಳೂರು ಗ್ರಾಮಾಂತರ – ಡಾ.ಎಂ.ಸಿ ಸುಧಾಕರ್
ಬೆಂಗಳೂರು ದಕ್ಷಿಣ – ರಾಮಲಿಂಗಾರೆಡ್ಡಿ
ಬೆಳಗಾವಿ- ಸತೀಶ್ ಜಾರಕಿಹೊಳಿ
ಬಳ್ಳಾರಿ-ಬಿ.ನಾಗೇಂದ್ರ
ಬೀದರ್-ಈಶ್ವರ್ ಖಂಡ್ರೆ
ಬಿಜಾಪುರ – ಎಂ.ಬಿ ಪಾಟೀಲ್
ಚಾಮರಾಜನಗರ – ಕೆ.ವೆಂಕಟೇಶ್
ಚಿಕ್ಕಬಳ್ಳಾಪುರ-ಕೆ.ಹೆಚ್ ಮುನಿಯಪ್ಪ
ಚಿಕ್ಕೋಡಿ- ಲಕ್ಷ್ಮೀ ಹೆಬ್ಬಾಳ್ಕರ್
ಚಿತ್ರದುರ್ಗ – ಡಿ. ಸುಧಾಕರ್
ದಕ್ಷಿಣ ಕನ್ನಡ – ದಿನೇಶ್ ಗುಂಡೂರಾವ್
ದಾವಣಗೆರೆ-ಎಸ್ ಎಸ್ ಮಲ್ಲಿಕಾರ್ಜುನ್
ಧಾರವಾಡ- ಸಂತೋಷ್ ಲಾಡ್
ಗುಲ್ಬರ್ಗಾ-ಪ್ರಿಯಾಂಕ್ ಖರ್ಗೆ
ಹಾಸನ – ಕೆ.ಎನ್ ರಾಜಣ್ಣ
ಹಾವೇರಿ – ಹೆಚ್ ಕೆ ಪಾಟೀಲ್
ಕೋಲಾರ- ಬಿ.ಎಸ್ ಸುರೇಶ್
ಕೊಪ್ಪಳ – ಶಿವರಾಜ್ ತಂಗಡಗಿ
ಮಂಡ್ಯ – ಚೆಲುವರಾಯಸ್ವಾಮಿ
ಮೈಸೂರು ಡಾ.ಹೆಚ್ ಸಿ ಮಹದೇವಪ್ಪ
ರಾಯಚೂರು- ಎನ್ ಎಸ್ ಬೋಸರಾಜು
ಶಿವಮೊಗ್ಗ – ಮಧು ಬಂಗಾರಪ್ಪ
ತುಮಕೂರು – ಡಾ.ಜಿ ಪರಮೇಶ್ವರ್
ಉಡುಪಿ-ಚಿಕ್ಕಮಗಳೂರು – ಕೆ.ಜೆ ಜಾರ್ಜ್
ಉತ್ತರ ಕನ್ನಡ – ಮಂಕಾಳ ವೈದ್ಯ ಅವರನ್ನು ನೇಮಕ ಮಾಡಲಾಗಿದೆ.
ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ