ಕಾರ್ಕಳ: ಬೆಂಗಳೂರಿನ ನಡೆದ ರಾಜ್ಯಮಟ್ಟದ ಪ್ರೊ ಪಂಜ ಕುಸ್ತಿ(ಆರ್ಮ್ ರಸ್ಲಿಂಗ್) ಯಲ್ಲಿ ಕಾರ್ಕಳದ ನೀರೆ ಬೈಲೂರಿನ ಸುಜಿತ್ ಕುಮಾರ್ ಅವರು ಚಿನ್ನದ ಪದಕ ಗೆದ್ದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ನೀರೆ ಬೈಲೂರಿನ ಸುಧಾಕರ ನಾಯಕ್ ಹಾಗೂ ಜ್ಯೋತಿ ನಾಯಕ್ ದಂಪತಿಯ ಪುತ್ರರಾದ ಸುಜಿತ್ ಕುಮಾರ್ ಈ ಹಿಂದೆ ಜಿಲ್ಲಾ ಹಾಗೂ ವಲಯ ಮಟ್ಟದ ಪಂಜ ಕುಸ್ತಿ ಪಂದ್ಯಾವಳಿಯಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಇದೀಗ ರಾಜ್ಯ ಮಟ್ಟದಲ್ಲಿ ಚಿನ್ನದ ಪದಕ ಪಡೆದ ಸುಜಿತ್ ಕುಮಾರ್, ನಾಗ್ಪುರದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಪಂಜ ಕುಸ್ತಿಗೆ ರಾಜ್ಯದಿಂದ ಆಯ್ಕೆಯಾಗಿದ್ದಾರೆ.
ನೀವು ಈಗಾಗಲೇ ಶಿಕ್ಷಣ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿ ಇದ್ದೀರಾ? ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ