ಹೆಬ್ರಿ : ಇತ್ತೀಚೆಗೆ ಗುಲ್ಬರ್ಗಾದಲ್ಲಿ ನಡೆದ ವಿದ್ಯಾಭಾರತಿ ಕರ್ನಾಟಕ ರಾಜ್ಯ ಮಟ್ಟದ ವಿಜ್ಞಾನ ಪ್ರದರ್ಶನದಲ್ಲಿ ಹೆಬ್ರಿ ಅಮೃತಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳಾದ ಪ್ರಣಮ್ ಮತ್ತು ಪವನ್ ಪ್ರಥಮ ಸ್ಥಾನವನ್ನು ಮತ್ತು 9ನೇ ತರಗತಿಯ ಪ್ರಣವ್ ರಾಯ್ಕರ್ ತೃತೀಯ ಸ್ಥಾನವನ್ನು ಪಡೆದು ಕ್ಷೇತ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಸಾಧನೆಗೈದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಮುಖ್ಯ ಶಿಕ್ಷಕಿ ಅಪರ್ಣಾ ಆಚಾರ್ ಅವರು ಗಣಿತ ಶಿಕ್ಷಕಿ ಪಂಚಮಿ ಮತ್ತು ವಿಜ್ಞಾನ ಶಿಕ್ಷಕಿ ರಕ್ಷಾ ಮಾತಾಜಿಯವರನ್ನು ಅಭಿನಂದಿಸಿದ್ದಾರೆ.