ಕಾರ್ಕಳ : ಸುಮಾರು 2 ತಿಂಗಳ ಹಿಂದೆ ಕರ್ನಾಟಕ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಗಂಡಾAತರ ಕಾದಿದೆ. ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಹಲವಾರು ದುರ್ಘಟನೆ ನಡೆದಿರುವುದೇ ಅದಕ್ಕೆ ಸಾಕ್ಷಿ ಎಂದು ಬಿಜೆಪಿ ವಕ್ತಾರ ಕೆ.ಎಸ್.ಹರೀಶ್ ಶೆಣೈ ಹೇಳಿದ್ದಾರೆ.
ಕರ್ನಾಟಕವನ್ನು ಪಾಕಿಸ್ತಾನದ ಹಾಗೆ ದಿವಾಳಿಯತ್ತ ಕೊಂಡೊಯ್ಯುವ ಸಿದ್ದರಾಮಯ್ಯನವರ ಬಜೆಟ್, ಜಗತ್ತಿಗೆ ಶಾಂತಿ ಸಾರುವ ಜೈನ ಮುನಿಗಳಿಗೆ ಕರೆಂಟ್ ಶಾಕ್ ಕೊಟ್ಟು 9 ತುಂಡುಗಳನ್ನಾಗಿ ಕತ್ತರಿಸಿ ಹತ್ಯೆ ಮಾಡಿರುವುದು, ಮೈಸೂರಿನ ಟಿ.ನರಸೀಪುರದ ಯುವ ಬ್ರಿಗೇಡ್ ಸಂಚಾಲಕ ಮತ್ತು ಹಿಂದೂ ಸಂಘಟನೆಯ ಸಕ್ರೀಯ ಕಾರ್ಯಕರ್ತನ ಕೊಲೆ, (ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರ ಮಗನಿಗೂ ಹತ್ಯೆ ಮಾಡಿದ ವ್ಯಕ್ತಿಗೆ ಇರುವ ಸಂಬAಧ ಸಂಶಯಾಸ್ಪದ), 2 ದಿನಗಳ ಹಿಂದೆ ಮಂಗಳೂರಿನಲ್ಲಿ ಯುವಕನೊಬ್ಬನಿಗೆ ಪೆಟ್ರೋಲ್ ಹಾಕಿ ಬೆಂಕಿ ಕೊಟ್ಟು ಕೊಲೆ ಮಾಡಿರುವುದು, ಬಜೆಟ್ ಅಧಿವೇಶನದಲ್ಲಿ ಸಂಶಯಾಸ್ಪದ ವ್ಯಕ್ತಿ ವಿಧಾನಸಭೆಗೆ ಬಂದು ಶಾಸಕರ ಆಸೀನದಲ್ಲಿ ಕುಳಿತಿರುವುದು, ವಿಧಾನಸಭೆ ಅಧಿವೇಶನ ನೋಡಲು ಬಂದಿರುವ ಮಹಿಳೆಯೊಬ್ಬರ ಪರ್ಸ್ನಲ್ಲಿ ಚೂರಿ ಸಿಕ್ಕಿರುವುದು, ಇವೆಲ್ಲಾ ಘಟನೆಗಳನ್ನು ನೋಡಿ ಕರ್ನಾಟಕ ರಾಜ್ಯದ ಜನತೆ ಭಯಬೀತರಾಗಿದ್ದಾರೆ.
ಇನ್ನು ಮುಂದಿನ ದಿನಗಳಲ್ಲಿ ರಾಜ್ಯದೆಲ್ಲೆಡೆ ಬಾಂಬ್ ತಯಾರಿಸುವ ಕಾಂಗ್ರೆಸ್ ಬ್ರರ‍್ಸ್ ಗಳು ಬಾಂಬ್ ಹಿಡಿದು ತಿರುಗಿ ಜನರನ್ನು ಬೆದರಿಸುವ ದಿನಗಳೂ ಬರಬಹುದು.
ಕಾಂಗ್ರೆಸ್‌ನ ಆಡಳಿತದಲ್ಲಿ ಹೀಗೆಯೇ ಹಿಂದೂಗಳ ಹತ್ಯೆ ಮುಂದುವರೆದಲ್ಲಿ ಹತ್ಯೆಯಾದವರ ಪೋಷಕರ ಶಾಪ ತಗುಲಿ, ಕೆಲ ತಿಂಗಳಲ್ಲಿಯೇ ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಗಂಡಾತರ ಎದುರಾಗಲಿದೆ ಎಂದು ಕಾರ್ಕಳ ಬಿಜೆಪಿ ವಕ್ತಾರ ಕೆ.ಎಸ್.ಹರೀಶ್ ಶೆಣೈ ಹೇಳಿದ್ದಾರೆ.