ಕಾರ್ಕಳ: ಅಯೋಧ್ಯೆಯಲ್ಲಿ ಜ.22ರಂದು ನಡೆಯಲಿರುವ ರಾಮ ಮಂದಿರ ಲೋಕಾರ್ಪಣೆ ಇಡೀ ದೇಶ ಹಾಗೂ ಜಗತ್ತಿಗೆ ಸಂಭ್ರಮದ ದಿನವಾಗಿದೆ.ಶ್ರೀರಾಮ ದೇವರ ಪ್ರಾಣಪ್ರತಿಷ್ಠೆಯ ಈ ಪವಿತ್ರ ದಿನದಂದು ಕಾರ್ಕಳ ತಾಲೂಕಿನ ಬಜಗೋಳಿಯಲ್ಲಿ ಸಾವಿರಾರು ಭಕ್ತರೊಂದಿಗೆ ರಾಮೋತ್ಸವವನ್ನು ಆಚರಿಸಲಾಗುವುದು ಎಂದು ಕ್ವಾರಿ ಹಾಗೂ ಸ್ಟೋನ್ ಕ್ರಶರ್ ಮಾಲಕರ ಸಂಘದ ರಾಜ್ಯಾಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ ಹೇಳಿದರು.
ಅವರು ಶುಕ್ರವಾರ ಕಾರ್ಕಳದ ಹೊಟೇಲ್ ಪ್ರಕಾಶ್ ನಲ್ಲಿ ಸುದ್ದಿಗೋಷ್ಟಿ ನಡಸೆಸಿ ಮಾತನಾಡಿ, ರಾಮ ಮಂದಿರಕ್ಕೆ ರಾಮನ ಮೂಲ ವಿಗ್ರಹಕ್ಕೆ ಬೇಕಾದ ಪವಿತ್ರ ಶಿಲೆಕಲ್ಲು ಈದು ಗ್ರಾಮದಿಂದ ಸಮರ್ಪಣೆಯಾಗಿರುವುದು ನಮ್ಮ ಸೌಭಾಗ್ಯ. ಈ ಹಿನ್ನಲೆಯಲ್ಲಿ ರಾಮ ದೇವರ ಪ್ರಾಣಪ್ರತಿಷ್ಠೆಯ ದಿನದಂದು ಬೆಳಗ್ಗೆ 8 ಗಂಟೆಯಿAದ ಶ್ರೀರಾಮ ತಾರಕ ಮಂತ್ರ ಯಾಗ, 10.30ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ, ತದನಂತರ 11.45ರಿಂದ ರಾಮ ದೇವರ ಪ್ರಾಣ ಪ್ರತಿಷ್ಠೆ ಆರಂಭವಾಗುತ್ತಿದ್ದAತೆಯೇ 1008 ರಾಮ ಭಕ್ತರಿಂದ ಹನುಮಾನ್ ಚಾಲೀಸಾ ಪಠಣ, ಸಾಮೂಹಿಕ ಕುಣಿತ ಭಜನೆ ಹಾಗೂ ಮಕ್ಕಳಲ್ಲಿ ಸನಾತನ ಹಿಂದೂ ಧರ್ಮದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸೂರ್ಯಕಿರಣ್ ಚಾರಿಟೇಬಲ್ ಟ್ರಸ್ಟ್ ಉದ್ಘಾಟಿಸುವ ಮೂಲಕ ಹಿಂದೂ ಧರ್ಮ ಶಿಕ್ಷಣ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಹಾಗೂ ಈ ಹಿಂದೆ ಅಯೋಧ್ಯೆಯಲ್ಲಿ ಕರಸೇವೆ ಮಾಡಿ ರಾಮಜನ್ಮಭೂಮಿ ಹೋರಾಟದಲ್ಲಿ ಭಾಗಿಯಾಗಿದ್ದ ಕಾರ್ಕಳ ತಾಲೂಕಿನ ಹಿರಿಯರನ್ನು ಸನ್ಮಾನಿಸಿ ಗೌರವಿಸಲಾಗುತ್ತದೆ ಹಾಗೂ ಸಾಂಯಕಾಲ ಎಂದು ರವೀಂದ್ರ ಶೆಟ್ಟಿ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಹಿಂದೂ ಜಾಗರಣ ವೇದಿಕೆಯ ಪ್ರಮುಖರಾದ ಗುರುಪ್ರಸಾದ್ ನಾರಾವಿ, ಸುರೇಶ್ ಸಾಲಿಯಾನ್, ಹಾಗೂ ರಜತ್ ರಾಮ ಮೋಹನ್ ಉಪಸ್ಥಿತರಿದ್ದರು.
ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ