Share this news

ಕಾರ್ಕಳ: ರಾಮ ಮಂದಿರದ ಲೋಕಾರ್ಪಣೆಗೊಂಡಿದ್ದು, ಇಡೀ ದೇಶಕ್ಕೆ ದೇಶವೇ ಸಂಭ್ರಮಾಚರಣೆಯಲ್ಲಿದೆ. ಸೋಮವಾರ ರಾಮಲಲ್ಲಾನ ಪ್ರಾಣಪ್ರತಿಷ್ಠೆಯ ಅಂಗವಾಗಿ ಬಹುತೇಕ ಎಲ್ಲಾ ದೇವಸ್ಥಾನಗಳಲ್ಲಿ ವಿಶೇಷ ಭಜನೆ, ಧಾರ್ಮಿಕಸಭೆ ಹಾಗೂ ಮಧ್ಯಾಹ್ನ ವಿಶೇಷ ಪೂಜೆ ನಡೆಯಿತು. ಕಾರ್ಕಳ ಪೇಟೆಯಲ್ಲಿ ಸಾರ್ವಜನಿಕರಿಗೆ ಉಚಿತ ಉಪಹಾರ,ಪಾನೀಯದ ವ್ಯವಸ್ಥೆ ಮಾಡಲಾಗಿತ್ತು.
ಕಾರ್ಕಳ ಬಂಡೀಮಠ ಮಹಾಗಣಪತಿ ದೇವಸ್ಥಾನ, ವೇಣುಗೋಪಾಲಕೃಷ್ಣ ದೇವಸ್ಥಾನ,ಅನಂತಪದ್ಮನಾಭ ದೇವಸ್ಥಾನ, ವೆಂಕಟರಮಣ ದೇವಸ್ಥಾನ ಸೇರಿದಂತೆ ಇತರೇ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಾಗೂ ಭಕ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು,ಕಾರ್ಕಳದ ಗಂಗಾ ಬೋರ್ ವೆಲ್ಸ್ ವತಿಯಿಂದ ಲಘು ಪಾನೀಯ ವ್ಯವಸ್ಥೆ ಮಾಡಲಾಯಿತು. ಸಾಲ್ಮರ ಹಾಗೂ ಕಾರ್ಕಳ ಮಲ್ಲಿಗೆ ಓಣಿಯಲ್ಲಿ ಜಿ.ಎಸ್.ಬಿ ಬಾಂಧವರು ಲಘು ಉಪಹಾರ, ಪಾನೀಯ ಹಾಗೂ ಸಿಹಿತಿಂಡಿ ವಿತರಿಸಿದರು. ಇದಲ್ಲದೇ ಜಯಭಾರತಿ ವಾಟರ್ ಸಪ್ಲೆöÊ ವತಿಯಿಂದ ಉಪಹಾರ ಹಾಗೂ ಊಟದ ವ್ಯವಸ್ಥೆ ಮಾಡಲಾಗಿತ್ತು.

ಸರ್ಕಾರಿ ರಜೆಯಿಲ್ಲದಿದ್ದರೂ ಕಾರ್ಕಳ ಪೇಟೆ ಸ್ವಯಂಪ್ರೇರಿತ ಬಂದ್!
ರಾಮ ಮಂದಿರ ಲೋಕಾರ್ಪಣೆಯ ಸಂದರ್ಭದಲ್ಲಿ ಸರ್ಕಾರಿ ರಜೆ ನೀಡುವಂತೆ ವಿಪಕ್ಷ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ಆಗ್ರಹಿಸಿದ್ದರೂ ಸಿಎಂ ಸಿದ್ದರಾಮಯ್ಯ ಮಾತ್ರ ಯಾವುದೇ ಕಾರಣಕ್ಕೂ ರಜೆ ನೀಡುವುದಿಲ್ಲವೆಂದು ಬಿಗಿಪಟ್ಟು ಹಿಡಿದ್ದರು. ಆದರೆ ಅಂಗಡಿ ಮಾಲೀಕರು ಹಾಗೂ ವರ್ತಕರು ಮುಂಜಾನೆಯಿAದಲೇ ತಮ್ಮ ಅಂಗಡಿಮುAಗ್ಗಟ್ಟುಗಳನ್ನು ಬಂದ್ ಮಾಡಿ ವಹಿವಾಟು ಸ್ಥಗಿತಗೊಳಿಸಿ, ರಾಮ ಮಂದಿರದ ಲೋಕಾರ್ಪಣೆ ಅಂಗವಾಗಿ ಸಾರ್ವಜನಿಕರಿಗೆ ಸಿಹಿತಿಂಡಿ, ಪಾನೀಯ ವಿತರಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಕಾರ್ಕಳದೆಲ್ಲಡೆ ರಾಮನ ಭಾವಚಿತ್ರವಿರುವ ಕೇಸರಿ ಧ್ವಜಗಳು ರಾರಾಜಿಸುತ್ತಿದ್ದವು, ವಾಹನಗಳಿಗೂ ರಾಮ ಧ್ವಜ ಕಟ್ಟಿ ಸಂಭ್ರಮಾಚರಿಸಿದರು.
ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾ ಪೊಲೀಸ್ ಇಲಾಖೆ ಎಲ್ಲೆಡೆ ಬಿಗಿಬಂದೋಬಸ್ತ್ ಕೈಗೊಂಡಿತ್ತು

ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ  ಲಿಂಕ್ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *