Share this news

ಕಾರ್ಕಳ: ಮಂಗಳೂರು-ಮೂಡಬಿದ್ರೆ- ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಭರದಿಂದ ನಡೆಯುತ್ತಿದ್ದರೂ ಸಾಕಷ್ಟು ವಿವಾದಗಳಿಂದ ಮಾತ್ರ ಹೊರತಾಗಿಲ್ಲ.ಸರ್ವೀಸ್ ರಸ್ತೆ ಕಾಮಗಾರಿ ವಿಚಾರದಲ್ಲಿ ಸಾಕಷ್ಟು ವಿವಾದ ಉಂಟಾಗಿದ್ದು,ಇದೀಗ ಕಾಮಗಾರಿ ಸಂದರ್ಭದಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ಅಪಾರ ಪ್ರಮಾಣದ ನೀರು ಪೋಲಾಗುತ್ತಿದ್ದು ಗ್ರಾಮಸ್ಥರು ಕಂಪೆನಿಯ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಸಾಣೂರು ರಾಷ್ಟ್ರೀಯ ಹೆದ್ದಾರಿಯಿಂದ ಅನಂತ ನಗರ ಕಾಲೋನಿಗೆ ಹೋಗುವ ರಸ್ತೆಯ ಬಳಿ ಯೋಗೀಶ್ ನಾಯಕ್’ರವರ ಮನೆಯ ಮುಂಭಾಗ ರಸ್ತೆಯ ಪಕ್ಕದಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ನೀರು ಬಾನೆತ್ತರಕ್ಕೆ ಚಿಮ್ಮುತ್ತಿದೆ.
ಕಾಮಗಾರಿ ವೇಳೆ ಮಣ್ಣು ಅಗೆದ ಪರಿಣಾಮ ಕುಡಿಯುವ ನೀರಿನ ಪೈಪ್ ಭೂಮಿಯ ಮೇಲ್ಮೈಯಲ್ಲಿದ್ದು, ವಾಹನಗಳ ಸಂಚಾರದಿಂದ ಪೈಪ್ ಒಡೆದಿರುವ ಶಂಕೆ ವ್ಯಕ್ತವಾಗಿದೆ. ಕಂಪೆನಿಯ ಬೇಜವಾಬ್ದಾರಿ ಕಾಮಗಾರಿಯ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಮೂರು ತಿಂಗಳುಗಳಿಂದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸುವಾಗ ಕುಡಿಯುವ ಸಂದರ್ಭದಲ್ಲಿ ಪದೇಪದೇ ನೀರಿನ ಪೈಪ್ ಒಡೆದರೂ ಕಾಮಗಾರಿ ನಡೆಸುವ ದಿಲೀಪ್ ಬಿಲ್ಡ್ ಕಾನ್ ಕಂಪನಿ ಇದನ್ನು ದುರಸ್ತಿ ಮಾಡಿಲ್ಲಮ ಈ ಕುರಿತು ಸ್ಥಳೀಯ ಗ್ರಾಮ ಪಂಚಾಯತ್ ಆಡಳಿತ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ  ಲಿಂಕ್ ಕ್ಲಿಕ್ ಮಾಡಿ

 

 

 

 

 

 
 

 

 
 

Leave a Reply

Your email address will not be published. Required fields are marked *