ಬೆಂಗಳೂರು : ಮೋದಿ ಸರ್‌ನೇಮ್ ಹೊಂದಿರುವವರೆಲ್ಲಾ ಏಕೆ ಕಳ್ಳರಾಗಿರ್ತಾರೆ’ ಎಂದು ಹೇಳಿದ್ದಕ್ಕೆ ಶಿಕ್ಷೆಗೆ ಒಳಗಾಗಿ ಸಂಸತ್ ಸದಸ್ಯತ್ವದಿಂದ ಅನರ್ಹಗೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ತಮ್ಮ ಶಿಕ್ಷೆಗೆ ತಡೆಯಾಜ್ಞೆ ನೀಡುವಂತೆ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಗುಜರಾತ್ ಹೈಕೋರ್ಟ್ ತಿರಸ್ಕರಿಸಿದೆ. ಈ ಮೂಲಕ ರಾಹುಲ್ ಗಾಂಧಿ ಅವರಿಗೆ ಸಂಸತ್ ಸದಸ್ಯನ ಅನರ್ಹತೆಯನ್ನು ಮುಂದುರೆಸಿದೆ.
ಕಳೆದ ಲೋಕಸಭಾ ಚುನಾವಣೆ ವೇಳೆ ‘ಮೋದಿ ಸರ್‌ನೇಮ್ ಹೊಂದಿರುವವರೆಲ್ಲಾ ಏಕೆ ಕಳ್ಳರಾಗಿರ್ತಾರೆ’ ಎಂದು ರಾಹುಲ್‌ಗಾಂಧಿ ಹೇಳಿಕೆ ನೀಡಿದ್ದರು. ಈ ಬಗ್ಗೆ ಮಾನನಷ್ಟ ಮೊಕದ್ದಮೆ ಹಾಗೂ ಒಂದು ಸಮುದಾಯದ ವಿರುದ್ಧ ಅವಹೇಳ ಮಾಡಿದ್ದಕ್ಕೆ ದೂರು ದಾಖಲಿಸಲಾಗಿತ್ತು. ಈ ಕುರಿತು ವಿಚಾರಣೆ ಮಾಡಿದ್ದ ಸೂರತ್ ಜಿಲ್ಲಾ ನ್ಯಾಯಾಧೀಶರು ಮಾ.23ರಂದು ರಾಹುಲ್‌ಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದ್ದರು. ಇದರಿಂದ ಸಂಸತ್ ಸದಸ್ಯ ಸ್ಥಾನ ರದ್ದಾಗಿತ್ತು. ಈಗ ಹೈಕೋರ್ಟ್ನಲ್ಲಿ ಶಿಕ್ಷೆಗೆ ತಡೆ ನೀಡಲು ನಿರಾಕರಣೆ ಮಾಡಿದ ಹಿನ್ನೆಲೆಯಲ್ಲಿ, ರಾಹುಲ್ ಗಾಂಧಿ ವಿಸ್ತೃತ ಪೀಠಕ್ಕೆ ಅರ್ಜಿ ಸಲ್ಲಿಸುವ ಅವಕಾಶ ಇದೆ.