Share this news

ನವದೆಹಲಿ: 1879 ರ ಕಾನೂನು ವೃತ್ತಿಪರರ ಕಾಯ್ದೆಯನ್ನು ರದ್ದುಗೊಳಿಸಲು ಮತ್ತು ವಕೀಲರ ಕಾಯ್ದೆ, 1961 ಅನ್ನು ತಿದ್ದುಪಡಿ ಮಾಡಲು ವಕೀಲರ ತಿದ್ದುಪಡಿ ಮಸೂದೆಯು ಲೋಕಸಭೆಯಲ್ಲಿ ಸೋಮವಾರ ಅಂಗೀಕಾರವಾಗಿದೆ.
ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ಅರ್ಜುನ್ ರಾಮ್ ಮೇಘವಾಲ್ ಅವರು ಲೋಕಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಂಡರು.
ಕಳೆದ ಆಗಸ್ಟ್ 1 ರಂದು ರಾಜ್ಯಸಭೆಯಲ್ಲಿ ಈ ಮಸೂದೆಯನ್ನು ಪರಿಚಯಿಸಿ ಬಳಿಕ ಆಗಸ್ಟ್ 3 ರಂದು ಮೇಲ್ಮನೆಯಲ್ಲಿ ಅಂಗೀಕರಿಸಲಾಯಿತು. ಈ ಮಸೂದೆಯು ಉಪಯುಕ್ತತೆಯನ್ನು ಕಳೆದುಕೊಂಡಿರುವ ಎಲ್ಲಾ ಹಳೆಯ ಕಾನೂನುಗಳು ಅಥವಾ ಸ್ವಾತಂತ್ರ್ಯ ಪೂರ್ವ ಕಾಯ್ದೆಗಳನ್ನು ರದ್ದುಗೊಳಿಸುವ ಕೇಂದ್ರ ಸರ್ಕಾರದ ಪ್ರಯತ್ನದ ಭಾಗವಾಗಿದೆ.

ಇದು ವಕೀಲರ ಕಾಯ್ದೆ, 1961 ರ ಮೂಲಕ ಮಾತ್ರ ಕಾನೂನು ವೃತ್ತಿಯನ್ನು ನಿಯಂತ್ರಿಸಲು ಪ್ರಸ್ತಾಪಿಸುತ್ತದೆ ಮತ್ತು ಕಾನೂನು ವೃತ್ತಿಪರರ ಕಾಯ್ದೆ, 1879 ಅನ್ನು ರದ್ದುಗೊಳಿಸುತ್ತದೆ. ಆದರೆ ನ್ಯಾಯಾಲಯಗಳಲ್ಲಿ ದಲ್ಲಾಳಿಗಳೊಂದಿಗೆ ವ್ಯವಹರಿಸುವ ನಿಬಂಧನೆಯನ್ನು ಉಳಿಸಿಕೊಳ್ಳುತ್ತದೆ. ಮಾತ್ರವಲ್ಲದೇ ಕಾನೂನು ಪುಸ್ತಕಗಳಲ್ಲಿ ಅನಗತ್ಯ ಶಾಸನಗಳ ಸಂಖ್ಯೆಯನ್ನು ಕಡಿಮೆ ಮಾಡುವ ಸಲುವಾಗಿ ವಕೀಲರ ಕಾಯ್ದೆ, 1961 ರಲ್ಲಿ ಕಾನೂನು ವೃತ್ತಿಪರರ ಕಾಯ್ದೆ, 1879 ರ ಸೆಕ್ಷನ್ 36 (ನ್ಯಾಯಾಲಯಗಳಲ್ಲಿ ದಲ್ಲಾಳಿಗಳ ಪಟ್ಟಿಯನ್ನು ರೂಪಿಸುವ ಮತ್ತು ಪ್ರಕಟಿಸುವ ಅಧಿಕಾರ) ನಿಬಂಧನೆಗಳನ್ನು ಇದು ಒಳಗೊಂಡಿದೆ.

Leave a Reply

Your email address will not be published. Required fields are marked *