Share this news

ಕಾರ್ಕಳ : ನಗರದ ಮಾರ್ಕೆಟ್ ರಸ್ತೆಯಲ್ಲಿ ಶ್ರೀದುರ್ಗಾ ಜ್ಯುವರಲ್ರ‍್ಸ್ ಚಿನ್ನಾಭರಣ ಅಂಗಡಿ ವ್ಯವಹಾರ ನಡೆಸಿ ಗ್ರಾಹಕರನ್ನು ವಂಚಿಸಿದ ಮಾಲಕ ರವೀಂದ್ರ ಆಚಾರ್ಯ ಯಾನೆ ರವೀಂದ್ರ ಎಂಬಾತನಿಗೆ ಕಾರ್ಕಳ ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶೆ ಚೇತನಾ ಎಸ್.ಎಫ್ ಅವರು ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ಹೊರಡಿಸಿದ್ದಾರೆ.

2009ರ ಅಕ್ಟೋಬರ್ 30ರಂದು ಸುರೇಶ್ ಕೆ ಸಾಲ್ಯಾನ್ ಎಂಬವರಿAದ 8.580 ಗ್ರಾಂ ತೂಕದ ರೂ.17,160 ಮೌಲ್ಯದ ಹಳೆಯ ರೇಡಿಯೋ ಚೈನನ್ನು ಪಡೆದುಕೊಂಡು ಇದರಿಂದ ಹೊಸ ರೋಪ್ ಚೈನನ್ನು ಮಾಡಿಕೊಡುವುದಾಗಿ ನಂಬಿಸಿ ರವೀಂದ್ರ ಆಚಾರ್ಯ ವಂಚನೆಗೈದಿದ್ದನು. 2010 ಆಗಸ್ಟ್ 20ರಂದು ಪ್ರೇಮಾ ಎಂಬವರಿAದ 8.500 ಗ್ರಾಂ ತೂಕದ ರೂ. 17,000 ಮೌಲ್ಯದ ಹಳೆ ಡಿಸೈನಿನ ಚಿನ್ನದ ಚೈನನ್ನು ಪಡೆದುಕೊಂಡು ಇದರಿಂದ 24 ಇಂಚು ಉದ್ದದ ಕಟ್ಟಿಂಗ್ ಹವಳದ ಹೊಸ ಸರವನ್ನು ಮಾಡಿಕೊಡುವುದಾಗಿ ನಂಬಿಸಿ ವಂಚನೆ ಮಾಡಿದ್ದನು.2010 ಆಗಸ್ಟ್ 20ರಂದು ವಸಂತಿ ಎಂಬವರಿAದ 8 ಗ್ರಾಂ ತೂಕದ ರೂ. 16,000 ಮೌಲ್ಯದ ಹಳೆಯ ಚಿನ್ನದ ಚಕ್ರಸರವನ್ನು ಪಡೆದುಕೊಂಡು ಅದರಿಂದ ಹೊಸ ರೇಡಿಯೋ ಚೈನ್ ಮಾಡಿಕೊಡುವುದಾಗಿ ನಂಬಿಸಿ ವಂಚನೆ ಮಾಡಿದ್ದನು. ಒಟ್ಟು ರೂ. 50,160 ಮೌಲ್ಯದ ಚಿನ್ನಾಭರಣವನ್ನು ಪಡೆದು ವಂಚನೆಗೈದಿದ್ದನು.

ಈ ಪ್ರಕರಣದ ಕುರಿತು ಕಾರ್ಕಳ ನಗರ ಠಾಣೆಯ ಪೋಲೀಸ್ ಮುಖ್ಯ ಪೇದೆಯಾಗಿದ್ದ ಯಶವಂತ ಎಂ..ವಿ. ಪ್ರಥಮ ವರ್ತಮಾನ ವರದಿ (ಎಫ್‌ಐಆರ್) ತಯಾರಿಸಿದ್ದರು. ಪೊಲೀಸ್ ಉಪನಿರೀಕ್ಷಕರಾಗಿದ್ದ ಪ್ರಮೋದ್ ಕುಮಾರ್ ಪಿ. ಮತ್ತು ಕಬ್ಬಾಳ್ ರಾಜ್ ಹೆಚ್.ಡಿ ಪ್ರಕರಣದ ತನಿಖೆ ನಡೆಸಿದ್ದರು. ಮುಂದಿನ ತನಿಖೆಯನ್ನು ಪೋಲೀಸ್ ಉಪನಿರೀಕ್ಷಕ ಇಮ್ರಾನ್ ಪೂರೈಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆಯನ್ನು ನಡೆಸಿದ ಕಾರ್ಕಳ ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶೆ ಚೇತನಾ ಎಸ್.ಎಫ್. ಅವರು ಆರೋಪಿ ರವೀಂದ್ರ ಆಚಾರ್ಯನಿಗೆ 3 ವರ್ಷಗಳ ಸಾದಾ ಸಜೆ ಮತ್ತು ರೂ.5,000 ದಂಡ, ದಂಡ ತೆರಲು ತಪ್ಪಿದ್ದಲ್ಲಿ 1 ತಿಂಗಳ ಸಾದಾ ಸಜೆ. ಕಲಂ.420 ಭಾರತೀಯ ದಂಡ ಸಂಹಿತೆ ಅಡಿಯ ಅಪರಾಧಕ್ಕೆ 2 ವರ್ಷಗಳ ಸಾದಾ ಸಜೆ ಮತ್ತು ರೂ.5,000 ದಂಡ, ದಂಡ ತೆರಲು ತಪ್ಪಿದ್ದಲ್ಲಿ 1 ತಿಂಗಳ ಸಾದಾ ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದ್ದಾರೆ.
ಸರಕಾರದ ಪರ ಸಹಾಯಕ ಸರಕಾರಿ ಅಭಿಯೋಜಕಿ ಶೋಭಾ ಮಹಾದೇವ ನಾಯ್ಕ ವಾದ ಮಂಡಿಸಿದ್ದರು.

Leave a Reply

Your email address will not be published. Required fields are marked *