Share this news

ಹೆಬ್ರಿ: ಹೆಬ್ರಿ ತಾಲೂಕಿನ ವರಂಗ ಗ್ರಾಮದ ವರಂಗ ಸಹಕಾರಿ ವ್ಯವಸಾಯಿಕ ಸಂಘದ ಹಿಂಬದಿಯ ಕಿಟಕಿಯ ಸರಳುಗಳನ್ನು ಕಳ್ಳರು ಮುರಿದು ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ ಘಟನೆ ಶನಿವಾರ ತಡರಾತ್ರಿ ಸಂಭವಿಸಿದೆ.
ಭಾನುವಾರ ರಜಾದಿನ ಇದ್ದ ಕಾರಣದಿಂದ ಕಳ್ಳರು ಪೂರ್ವನಿಯೋಜಿತವಾಗಿ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಕಚೇರಿಯೊಳಗೆ ನಗದು ಹಣಕ್ಕಾಗಿ ಹುಡುಕಾಡಿ ಅಲ್ಲಿನ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ, ಇದಲ್ಲದೇ ಚಿನ್ನಾಭರಣ ಹಾಗೂ ನಗದು ಇರಿಸುವ ಭದ್ರತಾ ಕೊಠಡಿಯ ಕಬ್ಬಿಣದ ಬಾಗಿಲನ್ನು ಗ್ಯಾಸ್ ಕಟರ್ ಉಪಯೋಗಿಸಿ ಕಬ್ಬಿಣದ ಬಾಗಿಲಿಗೆ ಕಿಂಡಿಯನ್ನು ಕೊರೆದು ಒಳಗೆ ಹೋಗಿ ಕಳ್ಳತನಕ್ಕೆ ಯತ್ನಿಸಿದ್ದಾರೆ. ಆದರೆ ಕಳ್ಳರಿಗೆ ನಗದು ಹಾಗೂ ಚಿನ್ನಾಭರಣ ದೋಚಲು ಸಾಧ್ಯವಾಗದೇ ಎಸ್ಕೇಪ್ ಆಗಿದ್ದಾರೆ.
ಈ ಕುರಿತು ಸಂಘದ ವ್ಯವಸ್ಥಾಪಕರು ಹೆಬ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ  ಲಿಂಕ್ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *