ನವದೆಹಲಿ: ವಾಂತಿ ಮಾಡಲು ಬಸ್ ಕಿಟಕಿಯಿಂದ ತಲೆ ಹೊರ ಹಾಕಿದ ಮಹಿಳೆ ಓವರ್ ಟೇಕ್ ಮಾಡಲು ಬಂದ ಅಪರಿಚಿತ ವಾಹನದ ಮಧ್ಯೆ ಸಿಲುಕಿಕೊಂಡು, ತಲೆ ಜಜ್ಜಿ ಪ್ರಾಣ ಕಳೆದುಕೊಂಡ ಭೀಕರ ಘಟನೆ ಹೊಸದಿಲ್ಲಿಯಲ್ಲಿ ವರದಿಯಾಗಿದೆ .
ಮಹಿಳೆ ಪ್ರಯಾಣಿಸುತ್ತಿದ್ದ ಹರಿಯಾಣ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸು ಹೊಸದಿಲ್ಲಿಯ ಹೊರವಲಯದ ಅಲಿಪುರದಲ್ಲಿ ಸಸಂಚರಿಸುವಾಗ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಮೃತ ಮಹಿಳೆಯನ್ನು ಉತ್ತರಪ್ರದೇಶದ ಪ್ರತಾಪಗಡದ ನಿವಾಸಿ ಬಬ್ಲಿ (20 ವರ್ಷ) ಎಂದು ಗುರುತಿಸಲಾಗಿದೆ.
ಕಾಶ್ಮೀರ ಗೇಟ್ನಿಂದ ಕುಟುಂಬ ಸದಸ್ಯರೊಂದಿಗೆ ಲೂಧಿಯಾನಕ್ಕೆ ಪ್ರಯಾಣಿಸಲು ಮಹಿಳೆ ಬಸ್ ಏರಿದ್ದರು ಎನ್ನಲಾಗಿದೆ. ವಾಂತಿ ಮಾಡಲು ತಲೆ ಹೊರಹಾಕಿದಾಗ, ಏಕಾಏಕಿ ಓವರ್ ಟೇಕ್ ಮಾಡಲು ಬಂದ ಅಪರಿಚಿತ ವಾಹನ ಢಿಕ್ಕಿ ಹೊಡೆದು, ತಲೆ ಜಜ್ಜಿದಾಗ ಸ್ಥಳದಲ್ಲೇ ಅಕೆ ಮೃತಪಟ್ಟಿದ್ದಾರೆ. ಆದರೆ ಅಪರಿಚಿತ ವಾಹನ ನಿಲ್ಲಸದೇ ಪರಾರಿಯಾಗಿದೆ. ಪೊಲೀಸರು ಢಿಕ್ಕಿ ಹೊಡೆದ ವಾಹನವನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ತಿಳಿದು ಬಂದಿದೆ.
ಬಸ್ಸಿನಲ್ಲಿ ಕೂತಿರುವಾಗ ಮಕ್ಕಳು ತಲೆ ಹೊರಗೆ ಹಾಕಿದರೆ ಅಥವಾ ಕೈಗಳನ್ನು ಹೊರಹಾಕಿದರೆ ತಕ್ಷಣವೇ ಡ್ರೈವರ್ ಅಥವಾ ಕಂಡಕ್ಟರ್ ಮೊದಲು ತಲೆ ಒಳಗೆಹಾಕಿ ಎಂದು ಬೈಯ್ಯುವುದುಂಟು. ಪೋಷಕರು ಎಷ್ಟು ಎಚ್ಚರಿಕೆಯಿಂದಿದ್ದರೂ ಸಾಕಾಗುವುದಿಲ್ಲ. ಚಲಿಸುತ್ತಿರುವ ಬಸ್ನ ಕಿಟಕಿಯಿಂದ ತಲೆ, ಕೈಗಳನ್ನು ಹೊರಹಾಕಿದರೆ ಪರಿಣಾಮ ಏನಾಗುವುದು ಎಂಬುದು ಈ ಘಟನೆಯಿಂದ ಕಲಿಯಬೇಕಾದ ಪಾಠ.