Share this news

ಕಾರ್ಕಳ :ತೋಟಗಾರಿಕೆ ಬೆಳೆಗಳ ಉತ್ಪಾದನೆ, ಉತ್ಪಾದಕತೆಯನ್ನು ಹೆಚ್ಚಿಸಿ, ಸಂಸ್ಕರಣೆ, ಶೇಖರಣೆ, ಸಾಗಾಣಿಕೆ ಹಾಗೂ ಮಾರುಕಟ್ಟೆ ವ್ಯವಸ್ಥೆಯನ್ನು ಉತ್ತಮಗೊಳಿಸಿ ತೋಟಗಾರಿಕೆ ಉದ್ಯಮದ ಸಮಗ್ರ ಅಭಿವೃದ್ಧಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಭಾರತ ಸರ್ಕಾರದ ಅಧೀನ ಸಂಸ್ಥೆಯಾದ ರಾಷ್ಟ್ರೀಯ ತೋಟಗಾರಿಕೆ ಮಂಡಳಿಯು ಹಲವಾರು ಯೋಜನೆಗಳನ್ನು ಜಾರಿಗೊಳಿಸುತ್ತಿದೆ.

ಪ್ರಥಮವಾಗಿ 2.00 ಹೆಕ್ಟೇರ್ (5.00 ಎಕ್ರೆ) ಗಿಂತ ಹೆಚ್ಚು ಪ್ರದೇಶದಲ್ಲಿ ಹೊಸ ತೋಟಗಳ ರಚನೆಗಾಗಿ ವಿವಿಧ ಘಟಕಗಳಾದ ಸಸ್ಯ ಉತ್ಪಾದನೆ, ಪ್ರದೇಶ ವಿಸ್ತರಣೆ, ನೀರಾವರಿ, ರಸಾವರಿ, ನಿಖರ ಬೇಸಾಯ ಮುಂತಾದವುಗಳನ್ನೊಳಗೊAಡAತೆ ತೋಟ ಅಭಿವೃಧ್ಧಿಗಾಗಿ ಶೇ. 40 ರಂತೆ ಗರಿಷ್ಠ ರೂ. 30.00 ಲಕ್ಷ ಪ್ರತಿ ಯೋಜನೆಗೆ ಸಾಲ ಆಧಾರಿತ ಸಹಾಯಧನ ಸೌಲಭ್ಯವಿರುತ್ತದೆ. ಅದೇ ರೀತಿ ಸಂರಕ್ಷಿತ ಬೇಸಾಯದಡಿ 2500 ಚ.ಮೀ.ಗೂ ಹೆಚ್ಚಿನ ಆಧುನಿಕ ರೀತಿಯ ಹಸಿರು ಮನೆ ನಿರ್ಮಾಣಕ್ಕೆ ಶೇ. 50 ರ ದರದಲ್ಲಿ ಗರಿಷ್ಠ ರೂ. 56.00 ಲಕ್ಷ ಪ್ರತಿ ಯೋಜನೆಗೆ ಸಾಲ ಆಧಾರಿತ ಸಹಾಯಧನ ಸೌಲಭ್ಯವಿರುತ್ತದೆ.

ಸಮಗ್ರ ಕೊಯ್ಲೋತ್ತರ ನಿರ್ವಹಣೆಗಾಗಿ ಪ್ಯಾಕ್ ಹೌಸ್, ಹಣ್ಣು ಮಾಗಿಸುವ ಘಟಕ, ಶೀತಲ ವಾಹನ ಖರೀದಿ, ಚಿಲ್ಲರೆ ಮಾರಾಟ ಮಳಿಗೆ, ಶೀತಲ ಘಟಕ, ಪ್ರಾಥಮಿಕ ಸಂಸ್ಕರಣೆ ಘಟಕಗಳ ನಿರ್ಮಾಣಕ್ಕಾಗಿ ಶೇ. 35 ರ ದರದಲ್ಲಿ ಗರಿಷ್ಠ ರೂ. 50.75 ಲಕ್ಷ ಪ್ರತಿ ಘಟಕಗಳಿಗೆ ಸಾಲ ಆಧಾರಿತ ಸಹಾಯಧನ ನೀಡಲು ಅವಕಾಶವಿರುತ್ತದೆ. ತೋಟಗಾರಿಕೆ ಉತ್ಪನ್ನಗಳನ್ನು ಶೇಖರಿಸಲು ವಿವಿಧ ಸಾಮಾರ್ಥ್ಯದ ಶೀತಲ ಉಗ್ರಾಣಗಳ ನಿರ್ಮಾಣ, ವಿಸ್ತರಣೆ ಹಾಗೂ ಆಧುನಿಕರಣಗೊಳಿಸಲು ಸಹ ಶೇ. 35ರ ಸಹಾಯಧನ ಸೌಲಭ್ಯವಿರುತ್ತದೆ. ಈ ಮೇಲಿನ ಯೋಜನೆಗಳನ್ನು ವೈಯುಕ್ತಿಕ ಅಥವಾ ಸಂಸ್ಥೆಗಳು ಪಡೆಯಬಹುದಾಗಿದೆ.

ಸರ್ಕಾರಿ ಸಂಸ್ಥೆಗಳಲ್ಲಿ ಉತ್ತಮ ಜಾತಿಯ ಗುಣಮಟ್ಟದ ಸಸಿಗಳ ಉತ್ಪಾದನೆಯಲ್ಲಿ ತಾಯಿ ಮರಗಳ ಘಟಕ, ಹಸಿರುಮನೆ, ಅಂಗಾAಶ ಕೃಷಿ ಪ್ರಯೋಗಾಲಯ, ವೈರಸ್ ಇಂಡೆಕ್ಸಿAಗ್ ಅನುಕೂಲ, ಗುಣಮಟ್ಟ ಧೃಢೀಕರಣ ಪ್ರಯೋಗಾಲಯ ಮುಂತಾದವುಗಳ ಸ್ಥಾಪನೆಗಾಗಿ ಶೇ. 100 ರಷ್ಟು ಸಹಾಯಧನ ಸೌಲಭ್ಯವಿರುತ್ತದೆ. ಮೇಲೆ ತಿಳಿಸಿದ ಯೋಜನೆಗಳ ಕುರಿತಾಗಿ ಆಸಕ್ತರು ಹೆಚ್ಚಿನ ಮಾಹಿತಿ ಪಡೆಯಬೇಕಾದಲ್ಲಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಇಲಾಖೆ, (ಜಿಪಂ), ಕಾರ್ಕಳ ರವರ ಕಚೇರಿ ಇಲ್ಲಿ ಸಂಪರ್ಕಿಸಬಹುದು.

Leave a Reply

Your email address will not be published. Required fields are marked *