ನವದೆಹಲಿ: ಚಂದ್ರಯಾನ-3 ರ ವಿಕ್ರಮ್ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ ಚಂದ್ರನ ಮೇಲ್ಮೈಯಲ್ಲಿ ಇನ್ನೂ ಸಕ್ರಿಯವಾಗಿಲ್ಲ ಆದರೆ ಅಂತ್ಯವಲ್ಲ ಈ ಕುರಿತು ಇನ್ನಷ್ಟು ಪ್ರಕ್ರಿಯೆಗಳು ನಡೆಯಬೇಕಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಾಜಿ ಅಧ್ಯಕ್ಷ ಕೆ ಶಿವನ್ ಹೇಳಿದ್ದಾರೆ.
ಲ್ಯಾಂಡರ್ ಹಾಗೂ ರೋವರ್ ಜತೆ ಮರುಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ಬಹಳಷ್ಟು ಡೇಟಾವನ್ನು ಇನ್ನೂ ಪ್ರಕ್ರಿಯೆಗೊಳಿಸಬೇಕಾಗಿದೆ ಎಂದು ಶಿವನ್ ಭರವಸೆ ವ್ಯಕ್ತಪಡಿಸಿದ್ದಾರೆ. ಚಂದ್ರಯಾನ-2 ಮಿಷನ್ ಸಮಯದಲ್ಲಿ ಇಸ್ರೋ ಮುಖ್ಯಸ್ಥರಾಗಿದ್ದ ಶಿವನ್ ಸುದ್ದಿಗಾರರೊಂದಿಗೆ ಮಾತನಾಡಿ “ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್‌ನ ವಿನ್ಯಾಸ ಜೀವನವು ಪ್ರಾಯೋಗಿಕವಾಗಿ ಮುಗಿದಿದೆ. ಏಕೆಂದರೆ, ಅವರು 14 ಭೂಮಿಯ ದಿನಗಳಲ್ಲಿ ತಮ್ಮ ಎಲ್ಲಾ ಕಾರ್ಯಗಳನ್ನು ಪೂರ್ಣಗೊಳಿಸಿದ್ದಾರೆ. ಆದರೂ ಇಸ್ರೋ ಚಂದ್ರನ ಮೇಲೆ ಸೂರ್ಯ ಉದಯಿಸಿದ ನಂತರ ಲ್ಯಾಂಡರ್ ಮತ್ತು ರೋವರ್‌ನೊಂದಿಗೆ ಸಂಪರ್ಕವನ್ನು ಸ್ಥಾಪಿಸಲು ಪ್ರಯತ್ನಿಸಲಾಗುತ್ತಿದ್ದು ಈ ನಿಟ್ಟಿನಲ್ಲಿ ವಿಜ್ಞಾನಿಗಳು ನಿರಂತರ ಪ್ರಯತ್ನ ಮುಂದುವರಿಸಿದ್ದಾರೆ ಎಂದು ತಿಳಿಸಿದರು. ಚಂದ್ರಯಾನ-3 ದತ್ತಾಂಶದ ಕುರಿತು ಮಾತನಾಡಿದ ಶಿವನ್, ಚಂದ್ರಯಾನ-3 ಮಿಷನ್ ಸಂಗ್ರಹಿಸಿದ ಮಾಹಿತಿಯು ಅಮೂಲ್ಯವಾಗಿದೆ ಮತ್ತು ವಿಜ್ಞಾನಿಗಳು ವಿಕ್ರಮ್ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್‌ಗಾಗಿ ಸಂಗ್ರಹಿಸಲಾದ ಡೇಟಾವನ್ನು ಇನ್ನೂ ವಿಶ್ಲೇಷಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಚಂದ್ರಯಾನ-1ರ ದತ್ತಾಂಶವನ್ನು ಬಳಸಿಕೊಂಡು ಅಮೆರಿಕದ ವಿಜ್ಞಾನಿಗಳು ಚಂದ್ರನ ಕುರಿತು ಹಲವು ರಹಸ್ಯಗಳನ್ನು ಬಯಲಿಗೆಳೆದಿರುವ ಕುರಿತು ಉಲ್ಲೇಖಿಸಿದ ಶಿವನ್, “ನಾವು ಇನ್ನೂ ಚಂದ್ರಯಾನ-1 ಡೇಟಾದಿಂದ ಹೊಸ ವಿಜ್ಞಾನವನ್ನು ಕಂಡುಕೊಳ್ಳುತ್ತಿದ್ದರೆ, ಅದರಿಂದ ವಿಷಯ ಹೊರತೆಗೆಯಲು ಸಾಕಷ್ಟು ಸಮಯ ಇದೆ ಎಂದಿದ್ದಾರೆ
ಒಟ್ಟಿನಲ್ಲಿ ಚಂದ್ರಯಾನ-3 ಮುಗಿದ ಅಧ್ಯಾಯ ಎಂದು ಎಲ್ಲರೂ ಅಂದುಕೊಂಡಿರುವಾಗ ಶಿವನ್ ನೀಡಿರುವ ಈ ಹೇಳಿಕೆ ಹೊಸ ಭರವಸೆ ಮೂಡಿಸಿದೆ